ಕರ್ನಾಟಕ

karnataka

ETV Bharat / sitara

ಕಿಚ್ಚನ ಟ್ವಿಟರ್ ಖಾತೆ ಹ್ಯಾಕ್​​​​ ಮಾಡಲು ಯತ್ನ, ಪಾಸ್​ವರ್ಡ್​ ಕದಿಯಲಾರದೆ ಕೈಚೆಲ್ಲಿದ ಕಿಡಿಗೇಡಿಗಳು - ಕಿಚ್ಚನ ಟ್ಚೀಟರ್ ಅಕೌಂಟ್ ಹ್ಯಾಕ್

ಸುದೀಪ್​​​​ ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ಹಾಗೂ‌ ಅಭಿಮಾನಿಗಳ ಜೊತೆ ಅಭಿಪ್ರಾಯ ಹಂಚಿಕೊಳ್ಳುವುದಕ್ಕೆ ಟ್ವೀಟರ್ ಖಾತೆಯನ್ನು ಸಮರ್ಪಕವಾಗಿ ಬಳಸುತ್ತಿದ್ದಾರೆ. ಈ ವೇಳೆ ಯಾರೋ ಕಿಡಿಗೇಡಿಗಳು ಟ್ವೀಟರ್ ಅಕೌಂಟ್ ಪಾಸ್​​ವರ್ಡ್​​​ ಅನ್ನು ಏಳು ಬಾರಿ ಕದಿಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಈ ಸಂಬಂಧ ಸುದೀಪ್ ಆಪ್ತರೊಬ್ಬರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ ಎಂ

ಸುದೀಪ್​​​​

By

Published : Sep 23, 2019, 7:53 PM IST

ಬೆಂಗಳೂರು: ನಟ ಕಿಚ್ಚ ಸುದೀಪ್​​​ ಅವರ ಅಧಿಕೃತ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲು ಯತ್ನ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಕಿಚ್ಚನ ಟ್ಚೀಟರ್ ಅಕೌಂಟ್ ಹ್ಯಾಕ್​​​​ ಮಾಡಲು ಯತ್ನ

ಸುದೀಪ್​​​​ ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ಹಾಗೂ‌ ಅಭಿಮಾನಿಗಳ ಜೊತೆ ಅಭಿಪ್ರಾಯ ಹಂಚಿಕೊಳ್ಳುವುದಕ್ಕೆ ಟ್ವಿಟರ್​ ಖಾತೆಯನ್ನು ಸಮರ್ಪಕವಾಗಿ ಬಳಸುತ್ತಿದ್ದಾರೆ. ಈ ವೇಳೆ ಯಾರೋ ಕಿಡಿಗೇಡಿಗಳು ಟ್ವೀಟರ್ ಅಕೌಂಟ್ ಪಾಸ್​​ವರ್ಡ್​​​ ಅನ್ನು ಏಳು ಬಾರಿ ಕದಿಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ.

ಈ ಸಂಬಂಧ ಸುದೀಪ್ ಆಪ್ತರೊಬ್ಬರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಕಿಚ್ಚ ಸುದೀಪ್​​​ ಕೋಟಿಗೊಬ್ಬ-3 ಚಿತ್ರದ ಚಿತ್ರೀಕರಣಕ್ಕಾಗಿ ಪೊಲೆಂಡ್​ಗೆ ಹೋಗಿದ್ದಾರೆ.

ABOUT THE AUTHOR

...view details