ಕಾರಣಾಂತರಗಳಿಂದ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಆಗದಿರುವ ಬಗ್ಗೆ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.
ಕೋಟಿಗೊಬ್ಬ-3 ಸ್ಥಗಿತಗೊಂಡಿದ್ದಕ್ಕೆ ಅಭಿಮಾನಿಗಳ ಪ್ರತಿಭಟನೆ ಸಿನಿಮಾ ಬಿಡುಗಡೆ ವಿಳಂಬಕ್ಕೆ ರಾಜ್ಯಾದ್ಯಂತ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದು, ಇದನ್ನು ಕಂಡು ಟ್ವೀಟ್ ಮಾಡಿರುವ ಸುದೀಪ್, ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ಬಿಡುಗಡೆಯಾಗಿಲ್ಲ. ಥಿಯೇಟರ್ಗಳ ಬಳಿ ಆಗಮಿಸಿರುವ ಎಲ್ಲ ಅಭಿಮಾನಿಗಳಿಗೂ ನಿರಾಸೆ ಉಂಟಾಗಿದೆ. ಹಾಗಾಗಿ ನಿಮ್ಮಲ್ಲಿ ಕ್ಷಮೆ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಕೋಟಿಗೊಬ್ಬ-3 ಸ್ಥಗಿತಗೊಂಡಿದ್ದಕ್ಕೆ ಅಭಿಮಾನಿಗಳ ಪ್ರತಿಭಟನೆ
ಮತ್ತೊಂದೆಡೆ ವಿಡಿಯೋ ಮೂಲಕ ಮಾತನಾಡಿರುವ ಅವರು, ಸೂರಪ್ಪ ಬಾಬು ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋವನ್ನು ನಾನು ನೋಡಿದ್ದೇನೆ. ಅವರ ಜೊತೆ ಸಿನಿಮಾ ಬಿಡುಗಡೆಗಾಗಿ ಜಾಕ್ ಮಂಜು, ಸಲಾಂ ಸೇರಿದಂತೆ ಚಿತ್ರ ತಂಡ ಸಾಕಷ್ಟು ಶ್ರಮವಹಿಸಿದೆ. ಆದರೆ, ಯಾರಿಂದ ಈ ಸಮಸ್ಯೆ ಆಯಿತು, ಯಾರಿಂದ ನೀವು ಈ ತೊಂದರೆ ಅನುಭವಿಸುತ್ತಿದ್ದೀರಿ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಈಗ ಏನೂ ಹೇಳುವುದಿಲ್ಲ. ಅದಕ್ಕೆ ಕಾಲವೇ ಉತ್ತರ ನೀಡುತ್ತದೆ.
ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಕಿಚ್ಚ ಸುದೀಪ್
ಇನ್ನು ಸಿನಿಮಾ ನಾಳೆಯಿಂದ ಭರ್ಜರಿಯಾಗಿ ಬಿಡುಗಡೆಯಾಗುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅಭಿಮಾನಿಗಳು ಯಾವುದೇ ಚಿತ್ರಮಂದಿರಗಳಿಗೆ ಡ್ಯಾಮೇಜ್ ಮಾಡಬಾರದು. ಇದರಲ್ಲಿ ಅವರ ತಪ್ಪೇನು ಇಲ್ಲ. ನಿಮ್ಮ ಪ್ರೀತಿ ನನಗೆ ಅರ್ಥವಾಗುತ್ತದೆ ಎಂದಿದ್ದಾರೆ.
ಚಿತ್ರಮಂದಿರದ ಮಾಲೀಕರು ಬಹಳ ಆತ್ಮೀಯತೆಯಿಂದ ನನ್ನ ಚಿತ್ರವನ್ನು ಸ್ವೀಕರಿಸಿದ್ದಾರೆ. ನಾಳೆ ಬೆಳಗ್ಗೆ 6 ಗಂಟೆಗೆ ಸಿನಿಮಾ ಬಿಡುಗೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದು ಆಗಿರುವ ಸಣ್ಣ ಡ್ಯಾಮೇಜ್ಗೆ ನನ್ನ ಕಡೆಯಿಂದ ಕ್ಷಮೆ ಇರಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.