ಸುದೀಪ್ ನಟನೆ 'ಫ್ಯಾಂಟಮ್' ಸಿನಿಮಾ ಶೂಟಿಂಗ್ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುಷೃತ್ತಿದ್ದು ಈಗತಾನೆ ಮುಕ್ತಾಯವಾಗಿದೆ. ಈ ಬಗ್ಗೆ ಸದೀಪ್ ಇದೊಂದು ಅದ್ಭುತ ಅನುಭವ. ಯಾರೂ ನಿರೀಕ್ಷೆ ಮಾಡದಿದ್ದಾಗ ಶೂಟಿಂಗ್ ಆರಂಭಿಸಿ, ಯೋಜನೆಯಂತೆ ಮುಗಿಸಿದ್ದು ನಿಜಕ್ಕೂ ಒಂದು ಸಾಧನೆ. ಕೊನೆಯ ಶೆಡ್ಯೂಲ್ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಟ್ವೀಟ್ ಮಾಡಿದ್ದರು.
ಕರ್ನಾಟಕದಲ್ಲೇ ಶೂಟಿಂಗ್ ಮಾಡಿ ಎಂದ ಅಭಿಮಾನಿ : ಸುದೀಪ್ ಏನ್ ಉತ್ರ ಕೊಟ್ರು ನೋಡಿ - ಫ್ಯಾಂಟಮ್' ಸಿನಿಮಾ ಶೂಟಿಂಗ್
ಅಭಿಮಾನಿಯೊಬ್ಬರು ಕರ್ನಾಟಕದಲ್ಲೇ ಚಿತ್ರೀಕರಣ ಮಾಡಿ, ಕನ್ನಡದ ಸಾಕಷ್ಟು ತಂತ್ರಜ್ಞರು ಕೆಲಸದಲ್ಲಿ ಹುಡುಕುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಕ್ಕೆ ಸುದೀಪ್ ರಿಪ್ಲೆ ಮಾಡಿದ್ದಾರೆ
ಕರ್ನಾಟಕದಲ್ಲೇ ಶೂಟಿಂಗ್ ಮಾಡಿ ಎಂದ ಅಭಿಮಾನಿ : ಸುದೀಪ್ ಏನ್ ಉತ್ರ ಕೊಟ್ರು ನೋಡಿ
ಇದಕ್ಕೆ ಪ್ರತಿಕ್ರಿಯೆ ನೀಡಿರುವರೊಬ್ಬರು ''ಗ್ರೇಟ್, ಸಾಧ್ಯವಾದರೆ ಕರ್ನಾಟಕದಲ್ಲೇ ಚಿತ್ರೀಕರಣ ಮಾಡಿ, ಕನ್ನಡದ ಸಾಕಷ್ಟು ತಂತ್ರಜ್ಞರು ಕೆಲಸದಲ್ಲಿ ಹುಡುಕುತ್ತಿದ್ದಾರೆ. ನಿಜವಾಗಲೂ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ'' ಎಂದು ಹೇಳಿದ್ದಾರೆ.
ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್ ''ಸರ್, ಈ ಚಿತ್ರದ ಸೆಟ್‌ನಲ್ಲಿ ಬಹುತೇಕ ಎಲ್ಲರೂ ಕರ್ನಾಟಕದವರೇ ಕೆಲಸ ಮಾಡುತ್ತಿದ್ದಾರೆ, ಧನ್ಯವಾದ'' ಎಂದು ಉತ್ತರಿಸಿದ್ದಾರೆ.