ಕನ್ನಡದ ವಾದ್ಯಗೋಷ್ಠಿ ಕಲಾವಿದರು ತಮಗೂ ಕಾರ್ಯಕ್ರಮ ಮಾಡಲು ಅವಕಾಶ ಕೊಡಬೇಕೆಂದು ಇತ್ತೀಚೆಗೆ ಬೆಂಗಳೂರಿನ ಮೌರ್ಯ ಸರ್ಕಲ್ನಲ್ಲಿ ಪ್ರತಿಭಟನೆ ಮಾಡಿದ್ದರು. ಬಡಪಾಯಿ ಕಲಾವಿದರ ಬೆಂಬಲಕ್ಕೆ ಈಗ ಪೈಲ್ವಾನ್ ಬೆಂಬಲ ದೊರೆತಿದೆ. ಕಿಚ್ಚ ಸುದೀಪ್ ಈ ವಾದ್ಯಗೋಷ್ಠಿ ಕಲಾವಿದರ ಪರ ಧ್ವನಿ ಎತ್ತಿದ್ದಾರೆ.
ವಾದ್ಯಗೋಷ್ಠಿ ಕಲಾವಿದರ ಬೆಂಬಲಕ್ಕೆ ನಿಂತ ನಟ ಸುದೀಪ್ - orchestral artists
ವಾದ್ಯಗೋಷ್ಠಿ ಕಲಾವಿದರ ಪರ ಧ್ವನಿ ಎತ್ತಿರುವ ಕಿಚ್ಚ ಸುದೀಪ್, ತಮ್ಮ ಟ್ವಿಟ್ಟರ್ನಲ್ಲಿ ಕಲಾವಿದರ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನನ್ನ ಸ್ನೇಹಿತರು ಹಾಗೂ ಅಭಿಮಾನಿಗಳು ಕೂಡಾ ಇದರ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಲಿದ್ದೇನೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಮುಂದೇನು ಅಂತಾ ಯೋಚಿಸುವುದಕ್ಕೇ ಒಂದು ವರ್ಷ ತೆಗೆದುಕೊಂಡರು ಧ್ರುವ..
ತಮ್ಮ ಟ್ವಿಟ್ಟರ್ ಪೇಜ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸುದೀಪ್, ನಾನು ಪ್ರತಿಭಟನಾನಿರತ ವಾದ್ಯಗೋಷ್ಠಿ ಕಲಾವಿದರ ಜೊತೆಗಿದ್ದೇನೆ. ಅವರ ಹೋರಾಟಕ್ಕೆ ನನ್ನ ಬೆಂಬಲ ಇದೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳು ಈ ವಿಷಯವಾಗಿ ಗಮನ ಹರಿಸಲು ಮತ್ತು ನೆರವನ್ನು ನೀಡಲು ವಿನಂತಿಸುತ್ತೇನೆ. ಹಾಗೆ ಈ ಕಲಾವಿದರ ಪರವಾಗಿ ಸರ್ಕಾರ ಕೂಡಾ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ದೂರದರ್ಶನ ಇಲ್ಲದ ಕಾಲದಿಂದಲೂ ನಮ್ಮನ್ನು ರಂಜಿಸುತ್ತಿರುವ ಈ ಕಲಾ ಬಳಗವನ್ನು ಮುಂದಿನ ತಲೆಮಾರಿಗೂ ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮದು. ಈ ಪ್ರತಿಭೆಗಳ ಪರವಾಗಿ ಎಲ್ಲರೂ ನಿಲ್ಲಬೇಕು ಎಂದು ಕಿಚ್ಚ ಸುದೀಪ್ ಮನವಿ ಮಾಡಿದ್ದಾರೆ.