ಕರ್ನಾಟಕ

karnataka

ETV Bharat / sitara

ಬಾಲ್ಯದ ವಿಶೇಷ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ಸುದೀಪ್ - Kiccha sudeep childhood photo

ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾ ಮುಖಾಂತರ ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ಅಭಿಮಾನಿಯೊಬ್ಬರು ತಮಗೆ ಕಳಿಸಿದ ಅವರ ಬಾಲ್ಯದ ಪೋಟೋವನ್ನು ಕಿಚ್ಚ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Sudeep shared his childhood photo
ಸುದೀಪ್

By

Published : Jul 8, 2020, 6:27 PM IST

ಕನ್ನಡ ಚಿತ್ರರಂಗ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್​ ಕೋಟಿಗೊಬ್ಬ 3 ಸಿನಿಮಾ‌‌ ಮುಗಿಸಿ, ಫ್ಯಾಂಟಮ್ ಚಿತ್ರದ ಶೂಟಿಂಗ್​​​ನಲ್ಲಿ ಬ್ಯುಸಿಯಾಗಿದ್ದಾರೆ.

ಸುದೀಪ್ ಬಾಲ್ಯದ ಫೋಟೋ

ಕಿಚ್ಚ ತಮ್ಮ ಅಭಿಮಾನಿಗಳಿಗೆ ಹೊಸ ಲುಕ್​​​ನಲ್ಲಿ ದರ್ಶನ್ ನೀಡಿದ್ದಾರೆ. ಸುದೀಪ್ ತಮ್ಮ ಬಾಲ್ಯದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ..? ಸುದೀಪ್ ತಮ್ಮ ಬಾಲ್ಯದ ಪೋಟೋ ಹಾಗೂ ಈಗಿನ ಪೋಟೋ ಎರಡನ್ನೂ ಒಟ್ಟಿಗೆ ಎಡಿಟ್ ಮಾಡಲಾಗಿದೆ. ಇದನ್ನು ನೋಡಿದರೆ ಸುದೀಪ್ ಯಾವುದೋ ಹುಡುಗನೊಂದಿಗೆ ಫೋಸ್ ಕೊಟ್ಟಿರುವ ರೀತಿ ಕಾಣುತ್ತದೆ.

ಅಸಲಿಗೆ ಈ ಮುದ್ದಾದ ಫೋಟೋವನ್ನು ಸುದೀಪ್ ಅಭಿಮಾನಿಯೊಬ್ಬರು ಕಿಚ್ಚನಿಗೆ ಉಡುಗೊರೆ ನೀಡಿದ್ದಾರೆ. ಇದನ್ನು ಕಿಚ್ಚ ಸೋಷಿಯಲ್ ಮೀಡಿಯಾಗೆ ಹಂಚಿಕೊಂಡು ಅಭಿಮಾನಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಈ ಫೋಟೋವನ್ನು ಇತರ ಅಭಿಮಾನಿಗಳು ಕೂಡಾ ಮೆಚ್ಚಿ ಲೈಕ್ಸ್, ಕಮೆಂಟ್ ಮಾಡಿದ್ದಾರೆ.

ABOUT THE AUTHOR

...view details