ಕರ್ನಾಟಕ

karnataka

ETV Bharat / sitara

ಕನ್ನಡ ಉಳಿಸೋಣ ಎಂದು ಹೇಳುವುದೇ ನಮ್ಮ ಮೊದಲ ಸೋಲು...ಸುದೀಪ್ ಹೀಗೆ ಹೇಳಿದ್ದೇಕೆ..? - Vikranth Rona movie

ಬಿಡದಿ ಬಳಿಯ ಇನೋವೇಟಿವ್ ಫಿಲ್ಮ್ ಸಿಟಿ ಬಳಿ ಕನ್ನಡಪರ ಸಂಘಟನೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸುದೀಪ್, ಕನ್ನಡ ಉಳಿಸಿ ಎಂದು ಹೇಳುವುದೇ ತಪ್ಪ, ಕನ್ನಡಿಗರಾಗಿ ಇನ್ಮುಂದೆ ಕನ್ನಡ ಬೆಳೆಸೋಣ ಎಂದು ಹೇಳೋಣ ಎಂದರು.

Honored to Sudeep
ಸುದೀಪ್​​ಗೆ ಸನ್ಮಾನ

By

Published : Mar 5, 2021, 6:45 PM IST

ಕಿಚ್ಚ ಸುದೀಪ್ ಇತ್ತೀಚೆಗಷ್ಟೇ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಕಳೆದ ತಿಂಗಳು ದುಬೈನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಸುದೀಪ್ ಬಹುನಿರೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದೀಗ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಸುದೀಪ್​​​​ಗೆ ಸನ್ಮಾನ ಮಾಡಿವೆ.

ಸುದೀಪ್​​ಗೆ ಸನ್ಮಾನ

ಇದನ್ನೂ ಓದಿ:ಕೃಷಿ ಇಲಾಖೆಗೆ ರಾಯಬಾರಿಯಾಗಿ ನಟ ದರ್ಶನ್

ಸುದೀಪ್ ಸದ್ಯಕ್ಕೆ ಬಿಗ್​​ಬಾಸ್​ ಸೀಸನ್ 8 ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ತಮಗಾಗಿ ನಿರ್ಮಿಸಲಾದ ಮನೆಗೆ ಸುದೀಪ್ ಆಗ್ಗಾಗ್ಗೆ ಹೋಗಿಬರುತ್ತಾರೆ. ಇಂದು ಕೂಡಾ ಸುದೀಪ್ ಅಲ್ಲೇ ಇದ್ದು, ಕೆಲವು ಕನ್ನಡಪರ ಸಂಘಟನೆಗಳು ಸುದೀಪ್ ಅವರನ್ನು ಭೇಟಿ ಮಾಡಿ ಸನ್ಮಾನ ಮಾಡಿದೆ. ಕಿಚ್ಚನ ಸಾಧನೆಗೆ ಕನ್ನಡಪರ ಸಂಘಟನೆಗಳು ಶ್ಲಾಘನೆ ವ್ಯಕ್ತಪಡಿಸಿವೆ. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುದೀಪ್, "ಬೇರೆ ಭಾಷೆಯವರು ಕನ್ನಡದಲ್ಲಿ ಮಾತನಾಡಿದಾಗ ಅವರಿಗೆ ಬೆಂಬಲ ನೀಡಿ. ನಮ್ಮಿಂದ ಯಾರೂ ಕನ್ನಡವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಕನ್ನಡ ಉಳಿಸಬೇಕು ಎಂದು ನಾವು ಬೇಡಿಕೊಳ್ಳುವುದು ನಮ್ಮ ಮೊದಲು ಸೋಲು. ಅದರ ಬದಲಿಗೆ ಇನ್ಮುಂದೆ ಕನ್ನಡ ಬೆಳೆಸೋಣ ಎಂದು ಹೇಳೋಣ. ನಾವೆಲ್ಲರೂ ಕನ್ನಡಿಗರೇ, ಎಲ್ಲರೂ ಸೇರಿ ಕನ್ನಡವನ್ನು ಬೆಳೆಸೋಣ" ಎಂದು ಹೇಳಿದರು.

ABOUT THE AUTHOR

...view details