ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್ ಪ್ರವೇಶಿಸಿ 25 ವರ್ಷ ತುಂಬಿದೆ. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಸೀಸನ್ 8 ಕೂಡ ಆರಂಭವಾಗುತ್ತಿದೆ. ಈ ಸೀಸನ್‌ಗೆ ಸುದೀಪ್ ಪಡೆಯುವ ಸಂಭಾವನೆ ಎಷ್ಟಿರಬಹುದು ಎಂಬ ಚರ್ಚೆ ನಡೆಯುತ್ತಿದೆ.
ಕನ್ನಡ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ನಟ ಸುದೀಪ್ಗೆ ಇದೆ ಎಂಬ ಮಾತು ಇದೆ. ಸಿನಿಮಾಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಹೋಸ್ಟ್ ಮಾಡುವ ಬಿಗ್ ಬಾಸ್ ರಿಯಾಲಿಟಿ ಶೋಗಾಗಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬ ಮಾತಿದೆ. ಇದು ನಿಜವೂ ಹೌದು ಎನ್ನುತ್ತಾರೆ ಬಲ್ಲವರು.
ಬಿಗ್ ಬಾಸ್ ಕಳೆದ 5 ಸೀಸನ್ ಹೋಸ್ಟ್ ಮಾಡಲು ₹21 ಕೋಟಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಇದು ಅಧಿಕೃತವಾಗಿಲ್ಲ. ಆದರೆ, ಬಿಗ್ ಬಾಸ್ ಸೀಸನ್ - 8ಕ್ಕೆ ಸುದೀಪ್ ಪಡೆದಿರುವ ಸಂಭಾವನೆ ದುಪ್ಪಟ್ಟು ಎನ್ನಲಾಗಿದೆ. ಕಳೆದ ಐದು ಸೀಸನ್‌ಗೆ ತಲಾ ಒಂದು ಸೀಸನ್‌ಗೆ ₹4 ಕೋಟಿಗೂ ಹೆಚ್ಚು.
ಈ ಸೀಸನ್‌ನಲ್ಲಿ 8 ರಿಂದ 10 ಕೋಟಿ ರೂ. ಪಡೆಯಬಹುದು ಎನ್ನಲಾಗುತ್ತಿದೆ. ವಿಶೇಷ ಮ್ಯಾನರಿಸಂ, ವಿಭಿನ್ನ ನಿರೂಪಣೆ ಮೂಲಕ ಬಿಗ್ ಬಾಸ್ ವಿಶೇಷವಾಗಿದೆ. ಕಳೆದ ಸೀಸನ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ವೀಕೆಂಡ್‌ಗಳಲ್ಲಿ ಕಾಣಿಸಿಕೊಳ್ಳುವ ಸುದೀಪ್‌ಗಾಗಿ ಪ್ರೇಕ್ಷಕ ವರ್ಗ ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಕಾಯುತ್ತಿರುತ್ತಾರೆ.
ಇವರನ್ನು ಬಿಟ್ಟು ಬೇರೆ ಯಾರೂ ನಡೆಸಿ ಕೊಡಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪು ಮೂಡಿಸಿದ್ದಾರೆ. ಫೆಬ್ರವರಿ 21 ರಿಂದ ಬಿಗ್ ಬಾಸ್ 8 ಆರಂಭವಾಗಲಿದೆ. ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗಬಹುದು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.