ಕರ್ನಾಟಕ

karnataka

ETV Bharat / sitara

'ಯುವರತ್ನ'ಹವಾ..10 ವರ್ಷ ಚಿಕ್ಕವರಾದರಂತೆ ಪವರ್‌ಸ್ಟಾರ್‌.. ಪೈಲ್ವಾನ್‌ ಕಿಚ್ಚ ಹೇಳ್ತಾರೆ ಕೇಳಿ.. - ಯುವರತ್ನ ಸಿನಿಮಾದಲ್ಲಿ ಪುನೀತ್​ ರಾಜ್​ ಕುಮಾರ್​

ಕಿಚ್ಚ ಸುದೀಪ್ ಯುವರತ್ನ ಟೀಸರ್​​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪುನೀತ್​​​ರಾಜ್​ಕುಮಾರ್​ 10ವರ್ಷ ಚಿಕ್ಕವರಂತೆ ಕಾಣಿಸ್ತಿದ್ದಾರೆ. ಚಿತ್ರದ ಪ್ರತಿ ಫ್ರೇಂ ಟು ಫ್ರೇಂ ವಿಸುವಲ್‌ ಕೂಡ ಅದ್ಭುತ. ಕೊನೆಯ ದೃಶ್ಯ ಕ್ಲಾಸ್ ಆಗಿದೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪವರ್ ಸ್ಟಾರ್ ಯಂಗ್ ಲುಕ್​​ಗೆ ಪೈಲ್ವಾನ್ ಫಿದಾ

By

Published : Oct 8, 2019, 6:07 PM IST

ನಿನ್ನೆ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ಯುವರತ್ನ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಸದ್ಯ ಒಂದು ಮಿಲಿಯನ್ ವೀವ್ಸ್​ ಕಂಡು ಯುವರತ್ನ ಚಿತ್ರದ ಟೀಸರ್ ಟ್ರೆಂಡಿಂಗ್​​​ನಲ್ಲಿದೆ.

ಅಪ್ಪು ಅಭಿಮಾನಿಗಳು ಯುವರತ್ನ ಚಿತ್ರದ ಟೀಸರ್ ನೋಡಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಇನ್ನೊಂದೆಡೆ ಸ್ಯಾಂಡಲ್​ವುಡ್, ಬಾಲಿವುಡ್​ ಸ್ಟಾರ್ಸ್ ಟೀಸರ್ ಕಂಡು ಬೆರಗಾಗಿದ್ದಾರೆ. ಕಿಚ್ಚ ಸುದೀಪ್ ಕೂಡ ಯುವರತ್ನ ಟೀಸರ್​​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪುನೀತ್​​​ರಾಜ್​ಕುಮಾರ್​ 10ವರ್ಷ ಚಿಕ್ಕವರಂತೆ ಕಾಣಿಸ್ತಿದ್ದಾರೆ. ಚಿತ್ರದ ಪ್ರತಿ ಫ್ರೇಂ ಟು ಫ್ರೇಂ ವಿಸುವಲ್‌ ಕೂಡ ಅದ್ಭುತವಾಗಿದೆ. ಕ್ಲಾಸ್ ಆಗಿರುವ ಕೊನೆಯ ದೃಶ್ಯಕ್ಕೆ ಕಮರ್ಷಿಯಲ್ ಟಚ್ ನೀಡಿರೋದ್ರಿಂದ ಚಿತ್ರ ಮತ್ತೊಂದು ಲೆವೆಲ್​​ಗೆ ಹೋಗೋದು ಪಕ್ಕಾ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುವರತ್ನ ಚಿತ್ರದಲ್ಲಿ ಅಪ್ಪು ಕಾಲೇಜ್​ ಸ್ಟೂಡೆಂಟ್ ಲುಕ್​ನಲ್ಲಿ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನವಿದ್ದು, ಹೊಂಬಾಳೆ ಫಿಲ್ಮ್ ಬ್ಯಾನರ್‌ನಡಿ ನಿರ್ಮಾಣವಾಗಿದೆ.

ABOUT THE AUTHOR

...view details