ಕರ್ನಾಟಕ

karnataka

ETV Bharat / sitara

ಕ್ರಿಕಿಟ್ ಬಳಿಕ ಬ್ಯಾಡ್ಮಿಂಟನ್​ ಆಡಿದ ಹೆಬ್ಬುಲಿ! - sudeep news

ಕಿಚ್ಚನಿಗೆ ಕ್ರಿಕೆಟ್ ಅಲ್ಲದೇ ಬ್ಯಾಡ್ಮಿಂಟನ್ ಅಂದ್ರೆ ಪಂಚಪ್ರಾಣವಂತೆ. ಜೆಪಿ ನಗರ 9ನೇ ಫೇಸ್‌ನಲ್ಲಿರುವ ಫಿಟ್ನೆಸ್‌ ಮತ್ತು ಸ್ಪೋರ್ಟ್ಸ್‌ ಕ್ಲಬ್​ನಲ್ಲಿ ಮಗಳು ಶಾನ್ವಿ, ಪತ್ನಿ ಪ್ರಿಯಾ ಹಾಗೂ ಸ್ನೇಹಿತರ ಜೊತೆ ಸುದೀಪ್ ಬ್ಯಾಡ್ಮಿಂಟನ್ ಆಟ ಆಡಿ ಸಖತ್ ಎಂಜಾಯ್ ಮಾಡಿದ್ದಾರೆ.

ಬ್ಯಾಡ್ಮಿಂಟನ್​ ಆಡಿದ ಹೆಬ್ಬುಲಿ
ಬ್ಯಾಡ್ಮಿಂಟನ್​ ಆಡಿದ ಹೆಬ್ಬುಲಿ

By

Published : Jan 12, 2021, 6:39 PM IST

Updated : Jan 12, 2021, 7:27 PM IST

ಕನ್ನಡ ಚಿತ್ರರಂಗದಲ್ಲಿ ನಟನೆ ಹಾಗೂ ನಿರ್ದೇಶನದಿಂದಲೇ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ನಟ ಕಿಚ್ಚ ಸುದೀಪ್ ಇದೀಗ ಕ್ರಿಕೆಟ್​​ ಅಲ್ಲದೇ ಮತ್ತೊಂದು ಆಟದಲ್ಲಿ ತಾವು ಪಂಟರ್​ ಎಂಬುದನ್ನು ತೋರಿಸಲು ಮುಂದಾಗಿದ್ದಾರೆ.

ಬ್ಯಾಡ್ಮಿಂಟನ್​ ಆಡಿದ ಕಿಚ್ಚ ಸುದೀಪ್​

ಕಿಚ್ಚನಿಗೆ ಕ್ರಿಕೆಟ್ ಅಲ್ಲದೇ ಬ್ಯಾಡ್ಮಿಂಟನ್​ ಆಟವೆಂದರೆ ಪಂಚಪ್ರಾಣವಂತೆ. ಮಗಳು ಶಾನ್ವಿ, ಪತ್ನಿ ಪ್ರಿಯಾ ಹಾಗೂ ಸ್ನೇಹಿತರ ಜೊತೆ ಸುದೀಪ್ ಬ್ಯಾಡ್ಮಿಂಟನ್ ಆಟ ಆಡಿ ಸಖತ್ ಎಂಜಾಯ್ ಮಾಡಿದ್ದಾರೆ. ಜೆಪಿ ನಗರ 9ನೇ ಫೇಸ್‌ನಲ್ಲಿರುವ ಫಿಟ್ನೆಸ್‌ ಮತ್ತು ಸ್ಪೋರ್ಟ್ಸ್‌ ಕ್ಲಬ್​ನಲ್ಲಿ ಸ್ನೇಹಿತರ ಜೊತೆ ಬ್ಯಾಡ್ಮಿಂಟನ್ ಆಟ ಆಡಿದ್ದಾರೆ. ಫ್ಯಾಂಟಮ್ ನಿರ್ದೇಶಕ ಅನೂಪ್ ಭಂಡಾರಿ ಕೂಡ ಕಿಚ್ಚನ ಜೊತೆ ಆಟ ಆಡಿದ್ದಾರೆ.

ಫಿಟ್ನೆಸ್‌ ಮತ್ತು ಸ್ಫೋರ್ಟ್ಸ್‌ ಕ್ಲಬ್

ಸ್ಟೈಲಿಶ್ ಸ್ಲೀವ್ಲೆಸ್ ಟೀ ಶರ್ಟ್ ಧರಿಸಿ ಹೆಬ್ಬುಲಿ ಬ್ಯಾಡ್ಮಿಂಟನ್ ಆಡಿದ್ದಾರೆ. ಇನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕಿಚ್ಚನ ಆಟ ನೋಡಿ ಥ್ರಿಲ್ ಆಗಿ, ಒಂದು ಫೋಟೋ ತೆಗೆಸಿಕೊಂಡಿದ್ದಾರೆ. ಫೆಟಲ್ ಸ್ಪೋರ್ಟ್ಸ್ ಕ್ಲಬ್ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒಳಗೊಂಡಿದೆ. ಇಲ್ಲಿ ಆರು ಬ್ಯಾಡ್ಮಿಂಟನ್‌ ಕೋರ್ಟ್‌ಗಳಿವೆ. ಸ್ಕೇಟಿಂಗ್‌ ಮಾಡಲು ಕೋರ್ಟ್‌ ಇದೆ. ಒಳಾಂಗಣ ಈಜುಕೊಳವೂ ಇದೆ. ಎರಡು ಕ್ರಿಕೆಟ್‌ ನೆಟ್‌ಗಳಿವೆ. ಜೊತೆಗೊಂದು ಫುಟ್‌ಬಾಲ್‌ ಕೋರ್ಟ್‌, ಜಾಗಿಂಗ್‌ ಟ್ರ್ಯಾಕ್‌ ಕೂಡ ಇದೆ. ಮಾತ್ರವಲ್ಲ ಯೋಗ, ಧ್ಯಾನ ಮಾಡಲು ಹಸಿರು ಲಾನ್‌ ವ್ಯವಸ್ಥೆ ಸಹ ಇದೆ.

ಓದಿ:ಸಫಾರಿ ವೇಳೆ ಹುಲಿ ಫೋಟೋ ಸೆರೆ ಹಿಡಿದ ದರ್ಶನ್​: ವಿಡಿಯೋ ವೈರಲ್​

Last Updated : Jan 12, 2021, 7:27 PM IST

ABOUT THE AUTHOR

...view details