ಕೊರೊನಾ ಬಳಿಕ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ದೊರೆತಿದ್ದು, ಅನೇಕ ಸ್ಟಾರ್ ನಟರು ಸದ್ಯ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಅಂತೆಯೇ ಕಿಚ್ಚ ಸುದೀಪ್ ಸಹ ಫ್ಯಾಂಟಮ್ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದು, ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದೆ.
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿಯಾದ ಕಿಚ್ಚ - tollywood latest news
ನಟ ಸುದೀಪ್ ಅವರು ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ರನ್ನು ಭೇಟಿ ಮಾಡಿದ್ದಾರೆ. ಸುದೀಪ್, ಪವನ್ ಕಲ್ಯಾಣ್ಗೆ ಒಂದು ಹಣ್ಣಿನ ಗಿಡ ಕೊಡುವ ಮೂಲಕ ಗಮನ ಸೆಳೆದಿದ್ದಾರೆ.
ಪವನ್ ಕಲ್ಯಾಣ್ ಭೇಟಿ ಮಾಡಿದ ನಟ ಸುದೀಪ್
ವಿಶೇಷ ಅಂದರೆ ನಟ ಸುದೀಪ್ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ರನ್ನು ಭೇಟಿ ಮಾಡಿದ್ದಾರೆ. ಸುದೀಪ್, ಪವನ್ ಕಲ್ಯಾಣ್ಗೆ ಒಂದು ಹಣ್ಣಿನ ಗಿಡ ಕೊಡುವ ಮೂಲಕ ಗಮನ ಸೆಳೆದಿದ್ದಾರೆ.
ಇದೊಂದು ಸೌಹಾರ್ದಯುತ ಮೀಟ್ ಆಗಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಪವನ್ ಕಲ್ಯಾಣ್ ಮತ್ತು ಸುದೀಪ್ ಮಾತನಾಡಿದ್ದಾರೆ. ಸದ್ಯದ ಸಿನಿಮಾ ಇಂಡಸ್ಟ್ರಿ ಬಗ್ಗೆ ಪವನ್ ಕಲ್ಯಾಣ್ ಹಾಗೂ ಕಿಚ್ಚ ಸುದೀಪ್ ಚರ್ಚಿಸಿದ್ದಾರೆ ಎನ್ನಲಾಗಿದೆ.