ನಟ ಸುದೀಪ್, ಕನ್ನಡ ಮಾತ್ರವಲ್ಲ, ಪರಭಾಷೆ ಸಿನಿಮಾಗಳಲ್ಲೂ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ದಬಾಂಗ್-3 ಚಿತ್ರದಲ್ಲಿ ಕೂಡಾ ಸುದೀಪ್, ಬಲ್ಲಿಸಿಂಗ್ ಆಗಿ ಸಲ್ಮಾನ್ ಖಾನ್ ಎದುರು ನಟಿಸಿದ್ದರು. ಈ ಚಿತ್ರದಲ್ಲಿ ಸುದೀಪ್ ನಟನೆ ಎಲ್ಲರಿಗೂ ಇಷ್ಟವಾಗಿತ್ತು.
ದಬಾಂಗ್-3 ನಂತರ ಮತ್ತೊಂದು ಪರಭಾಷೆ ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ನಟನೆ? - ಮನ್ಮಥುಡು ಚಿತ್ರದಲ್ಲಿ ಸುದೀಪ್ ನಟನೆ ಸಾಧ್ಯತೆ
'ಮನ್ಮಥುಡು' ಸಿನಿಮಾದಲ್ಲಿ ವಿಲನ್ ಪಾತ್ರಕ್ಕೆ ಸುದೀಪ್ ಸರಿಯಾದ ವ್ಯಕ್ತಿ ಎಂದು ಚಿತ್ರತಂಡ ಇತ್ತೀಚೆಗೆ ಅವರೊಂದಿಗೆ ಮಾತನಾಡಿದ್ದು, ಸುದೀಪ್ ಕೂಡಾ ಈ ಪಾತ್ರ ಮಾಡಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ತಿಳಿದುಬಂದಿಲ್ಲ.
![ದಬಾಂಗ್-3 ನಂತರ ಮತ್ತೊಂದು ಪರಭಾಷೆ ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ನಟನೆ? sudeep](https://etvbharatimages.akamaized.net/etvbharat/prod-images/768-512-5473904-thumbnail-3x2-sudeep.jpg)
ಇದೀಗ ಸುದೀಪ್ ತಮಿಳು ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಶಿಂಬು ಕಥಾನಾಯಕನಾಗಿ ನಟಿಸುತ್ತಿರುವ ತಮಿಳಿನ 'ಮನ್ಮಥುಡು' ಸಿನಿಮಾದಲ್ಲಿ ಸುದೀಪ್ ವಿಲನ್ ಆಗಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಪೊಲಿಟಿಕಲ್ ಥ್ರಿಲ್ಲರ್ ಕಥಾ ಅಂಶವುಳ್ಳ ಈ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆಯಂತೆ. ಇದಕ್ಕೂ ಮುನ್ನ ಈ ಪಾತ್ರಕ್ಕಾಗಿ ಚಿತ್ರತಂಡ 'ರೋಜಾ' ಖ್ಯಾತಿಯ ಅರವಿಂದ ಸ್ವಾಮಿ ಅವರನ್ನು ಸಂಪರ್ಕಿಸಿತ್ತು ಎನ್ನಲಾಗಿದೆ. ಆದರೆ ಈ ಪಾತ್ರಕ್ಕೆ ಸುದೀಪ್ ಸರಿಯಾದ ವ್ಯಕ್ತಿ ಎಂದು ಚಿತ್ರತಂಡ ಇತ್ತೀಚೆಗೆ ಅವರೊಂದಿಗೆ ಮಾತನಾಡಿದ್ದು, ಸುದೀಪ್ ಕೂಡಾ ಈ ಪಾತ್ರ ಮಾಡಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ತಿಳಿದುಬಂದಿಲ್ಲ. ಒಂದು ವೇಳೆ ಸುದೀಪ್ ಈ ಪಾತ್ರಕ್ಕೆ ಆಯ್ಕೆ ಆದಲ್ಲಿ, ನಿಜಕ್ಕೂ ಈ ಸಿನಿಮಾವನ್ನು ಕೂಡಾ ಸುದೀಪ್ ಅಭಿಮಾನಿಗಳು ತಪ್ಪದೆ ನೋಡುತ್ತಾರೆ ಎನ್ನಬಹುದು.