ಕರ್ನಾಟಕ

karnataka

ETV Bharat / sitara

ಸಾಂಪ್ರದಾಯಿಕ ದಿರಿಸಲ್ಲಿ ಮಿಂಚಿದ್ರು ಅನೂಪ್​​-ಸುದೀಪ್​​​ - ದಸರಾ ಸುದ್ದಿ

ದೇಶ ವಿಜಯದಶಮಿ ಮತ್ತು ಆಯುಧಪೂಜೆಯ ಸಂಭ್ರಮದಲ್ಲಿದೆ. ಚಿತ್ರನಿರ್ದೇಶಕ ಅನೂಪ್​ ಭಂಡಾರಿ ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

sudeep in traditional look
ಟ್ರಡಿಶನಲ್​​ ಲುಕ್​​​​ನಲ್ಲಿ ಮಿಂಚಿದ್ರು ಅನೂಪ್​​-ಸುದೀಪ್​​​

By

Published : Oct 25, 2020, 7:29 PM IST

ಸುದೀಪ್​​ ಅಭಿನಯದ 'ಫ್ಯಾಂಟಮ್' ಚಿತ್ರದ ಶೂಟಿಂಗ್​​​ ಹೈದ್ರಾಬಾದ್​​​ನಲ್ಲಿ ನಡೆಯುತ್ತಿದೆ. ಇದರ ನಡುವೆ ಕೂಡ ನಟ ಸುದೀಪ್​​ ಮತ್ತು ನಿರ್ದೇಶಕ ಅನೂಪ್​ ಭಂಡಾರಿ ಹಬ್ಬದ ಮೂಡ್​​​​​ನಲ್ಲಿದ್ದಾರೆ.

ಸುದೀಪ್​ ಮತ್ತು ಭಂಡಾರಿ ಇಬ್ಬರೂ ಟ್ರೆಡಿಶನಲ್​​ ಲುಕ್​​ನಲ್ಲಿ ಕಾಣುವ ಫೋಟೋವನ್ನು ಅಭಿಮಾನಿಗಳಿಗೆ ಪೋಸ್ಟ್‌ ಮಾಡಿದ್ದಾರೆ. ಸುದೀಪ್​​ ವೈಟ್​​ ಅಂಡ್ ವೈಟ್​​ ಅಂಗಿ-ಲುಂಗಿಯಲ್ಲಿ ಮಿಂಚಿದ್ರೆ, ಅನೂಪ್​​ ಬಿಳಿ ಬಣ್ಣದ ಜುಬ್ಬ ತೊಟ್ಟಿದ್ದಾರೆ.

ಸದ್ಯ ಹೈದ್ರಾಬಾದ್​​ನಲ್ಲಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಕೇರಳಕ್ಕೆ ತೆರಳಿ ಶೂಟಿಂಗ್​ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚಿತ್ರದಲ್ಲಿ ಸುದೀಪ್​ ವಿಕ್ರಾಂತ್​ ರೋಣನ ಪಾತ್ರ ನಿರ್ವಹಿಸಲಿದ್ದಾರೆ.

ABOUT THE AUTHOR

...view details