ಕಿಚ್ಚ ಸುದೀಪ್ ಆಗಾಗ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಜ್ಯೋತಿಷಿ ಅವತಾರದಲ್ಲಿ ಕಾಣಿಸಿಕೊಂಡಿರುವ ಅಭಿನಯ ಚಕ್ರವರ್ತಿ ಬಿಗ್ ಬಾಸ್ ಭವಿಷ್ಯವನ್ನು ಹೇಗೆ ಹೇಳ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಜ್ಯೋತಿಷಿಯಾಗಿ ಬಂದ ಕಿಚ್ಚ ಯಾರ ಭವಿಷ್ಯ ಹೇಳ್ತಾರೆ ಗೊತ್ತಾ? - ಸುದೀಪ್ ಸುದ್ದಿ
ಜ್ಯೋತಿಷಿ ವೇಷದ ಸುದೀಪ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಕಲರ್ಸ್ ಕನ್ನಡ, ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ, ಕಮೆಂಟ್‌ನಲ್ಲಿ ಹೇಳಿ ಎಂದು ಬರೆದಿದ್ದಾರೆ.
![ಜ್ಯೋತಿಷಿಯಾಗಿ ಬಂದ ಕಿಚ್ಚ ಯಾರ ಭವಿಷ್ಯ ಹೇಳ್ತಾರೆ ಗೊತ್ತಾ? ಜೋತಿಷಿಯಾಗಿ ಬಂದ ಕಿಚ್ಚ ಯಾರ ಭವಿಷ್ಯ ಹೇಳ್ತಾರೆ ಗೊತ್ತಾ?](https://etvbharatimages.akamaized.net/etvbharat/prod-images/768-512-10597127-thumbnail-3x2-giri.jpg)
ಜೋತಿಷಿಯಾಗಿ ಬಂದ ಕಿಚ್ಚ ಯಾರ ಭವಿಷ್ಯ ಹೇಳ್ತಾರೆ ಗೊತ್ತಾ?
ಜ್ಯೋತಿಷಿ ವೇಷದ ಸುದೀಪ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಕಲರ್ಸ್ ಕನ್ನಡ, ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ, ಕಮೆಂಟ್‌ನಲ್ಲಿ ಹೇಳಿ ಎಂದು ಬರೆದಿದ್ದಾರೆ. ಈ ಮೂಲಕ ಕನ್ನಡದ ಬಿಗ್ ಬಾಸ್ ಸೀಸನ್-8 ಶುರುವಿನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಇನ್ನು ಸುದ್ದಿಗಳು ಹರಿದಾಡುತ್ತಿರುವದು ನೋಡ್ತಿದ್ರೆ ಈ ಬಾರಿಯ ಬಿಗ್ ಬಾಸ್ ಫೆಬ್ರವರಿ 28ರಿಂದಲೇ ಶುರುವಾಗುವ ಸಾಧ್ಯತೆ ಇದೆ. ಆದ್ರೆ ಈ ಬಗ್ಗೆ ಕಿಚ್ಚನಾಗಲೀ ಅಥವಾ ಕಲರ್ಸ್ ಕನ್ನಡ ವಾಹಿನಿಯಾಗಲೀ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲ.
Last Updated : Feb 12, 2021, 3:43 PM IST