ಕರ್ನಾಟಕ

karnataka

ETV Bharat / sitara

'ಈ ಮೂವರಿಗೆ ನಿರ್ದೇಶನ ಮಾಡ್ಬೇಕು ಅಂತ ಕಥೆ ಮಾಡಿದ್ದೆ, ಆದ್ರೆ ಆಗ್ಲಿಲ್ಲ' - ದುಬೈನಿಂದ ಸುದ್ದಿಗೋಷ್ಠಿ ನಡೆಸಿ ಸುದೀಪ್​

ಸುದೀಪ್​​​ ಆರಂಭದ ದಿನಗಳಲ್ಲಿ ಉಪೇಂದ್ರ, ಶಿವರಾಜ್​​ಕುಮಾರ್​​, ಪುನೀತ್​​ ರಾಜ್​ಕುಮಾರ್​​ಗೆ ನಿರ್ದೇಶನ ಮಾಡುವ ಆಸೆ ಹೊತ್ತಿದ್ದರಂತೆ. ಅಲ್ಲದೆ ಅವರುಗಳಿಗೆ ಸಿನಿಮಾ ಕಥೆಗಳನ್ನೂ ಹೇಳಿದ್ದರಂತೆ.

'ಈ ಮೂವರಿಗೆ ನಿರ್ದೇಶನ ಮಾಡ್ಬೇಕು ಅಂತ ಕಥೆ ಮಾಡಿದ್ದೆ, ಆದ್ರೆ ಆಗ್ಲಿಲ್ಲ'
'ಈ ಮೂವರಿಗೆ ನಿರ್ದೇಶನ ಮಾಡ್ಬೇಕು ಅಂತ ಕಥೆ ಮಾಡಿದ್ದೆ, ಆದ್ರೆ ಆಗ್ಲಿಲ್ಲ'

By

Published : Jan 30, 2021, 4:56 PM IST

ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್‌ 25 ವರ್ಷಗಳನ್ನು ಪೂರೈಯಿಸಿದ್ದು, ಆ ಸಂಭ್ರಮವನ್ನು ಸುದೀಪ್​​ ಇಂದು ಎಲ್ಲರೊಡನೆ ಹಂಚಿಕೊಂಡಿದ್ದಾರೆ. ತಮ್ಮ‌ ಸಿನಿಮಾ ಜರ್ನಿಯಲ್ಲಿ ಕಂಡ ಏಳುಬೀಳುಗಳು ಹಾಗೂ ಸನ್ಮಾನದ ಬಗ್ಗೆ ಸುದೀಪ್ ದುಬೈನಿಂದ ಝೂಮ್‌ ಕಾಲ್​​ ಮೂಲಕ ಸುದ್ದಿಗೋಷ್ಠಿ ನಡೆಸಿ ಮಾತುಕತೆ ನಡೆಸಿದ್ದಾರೆ.

'ಈ ಮೂವರಿಗೆ ನಿರ್ದೇಶನ ಮಾಡ್ಬೇಕು ಅಂತ ಕಥೆ ಮಾಡಿದ್ದೆ, ಆದ್ರೆ ಆಗ್ಲಿಲ್ಲ'

ಈ ವೇಳೆ ತಾವು ಹೇಗೆ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು, ಹುಚ್ಚ ಸಿನಿಮಾ ಹೇಗೆ ಹೀರೋ ಮಾಡ್ತು, ಅಭಿಮಾನಿಗಳು ಆರಂಭದ ದಿನಗಳಲ್ಲಿ ಹೇಗೆ ಮೆಚ್ಚಿಕೊಂದ್ರು ಎಂಬೆಲ್ಲ ಮಾಹಿತಿಗಳನ್ನು ಸುದೀಪ್​​ ಹೇಳಿದ್ರು. ಇದೇ ವೇಳೆ ತಾವು ನಿರ್ದೇಶಕರಾಗಿ ಯಾರಿಗೆ ಆ್ಯಕ್ಷನ್​​ ಕಟ್​​ ಹೇಳಬೇಕು ಅಂತ ಅಂದುಕೊಂಡಿದ್ರು ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಪುನೀತ್​​ ಜೊತೆ ಸುದೀಪ್​​
ಶಿವರಾಜ್​ಕುಮಾರ್​ ಜೊತೆ ಸುದೀಪ್​​

ಹೌದು, ಸುದೀಪ್​​ ನಟ ಅಲ್ಲದೆ ನಿರ್ದೇಶಕರೂ ಹೌದು. ಆರಂಭದ ದಿನಗಳಲ್ಲಿ ಉಪೇಂದ್ರ, ಶಿವರಾಜ್​​ಕುಮಾರ್​​, ಪುನೀತ್​​ ರಾಜ್​ಕುಮಾರ್​​ಗೆ ನಿರ್ದೇಶನ ಮಾಡುವ ಆಸೆ ಹೊತ್ತಿದ್ದರಂತೆ. ಅಲ್ಲದೆ ಅವರುಗಳಿಗೆ ಸಿನಿಮಾ ಕಥೆಗಳನ್ನೂ ಹೇಳಿದ್ದರಂತೆ.

ಉಪೇಂದ್ರ ಜೊತೆ ಸುದೀಪ್​​

ABOUT THE AUTHOR

...view details