ಕರ್ನಾಟಕ

karnataka

ETV Bharat / sitara

ಕಿಚ್ಚ ಸುದೀಪ್​ಗೆ ಸಿಕ್ತು ಮತ್ತೊಂದು ಬಿರುದು - kannada kala tilaka

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಹಾಗೂ ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳು ಕಿಚ್ಚ ಸುದೀಪ್ ಅವರ 25 ವರ್ಷಗಳ ಸಿನಿಮಾ ಸೇವೆ ಗುರುತಿಸಿ 'ಕನ್ನಡ ಕಲಾ ತಿಲಕ' ಎಂಬ ಬಿರುದು ನೀಡಿ ಸನ್ಮಾನಿಸಿದೆ.

sudeep got another title  kannada kala tilakasudeep got another title  kannada kala tilaka
sudeep got another title kannada kala tilaka

By

Published : Feb 4, 2021, 3:56 PM IST

ಕನ್ನಡ ಚಿತ್ರರಂಗ ಅಲ್ಲದೇ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಅಂದ್ರೆ ಕಿಚ್ಚ ಸುದೀಪ್. ಇವರ ಅಭಿಮಾನಿಗಳು ಸುದೀಪ್​​ರನ್ನ ಕಿಚ್ಚ, ಅಭಿನಯ ಚಕ್ರವರ್ತಿ, ಬಾದ್​ಷಾ, ಮಾಣಿಕ್ಯ, ಕಿಚ್ಚ ಸುದೀಪ್ ಅಂತಾ ಹಲವಾರು ಹೆರುಗಳಿಂದ ಕರೆಯುತ್ತಾರೆ‌. ಈಗ ಮಾಣಿಕ್ಯನಿಗೆ ಮತ್ತೊಂದು ಹೊಸ ಬಿರುದನ್ನು ದುಬೈ ಅನಿವಾಸಿ ಕನ್ನಡಿಗರು ನೀಡಿ ಸನ್ಮಾನಿಸಿದ್ದಾರೆ‌‌.

ಕಿಚ್ಚ ಸುದೀಪ್​ಗೆ ಸಿಕ್ತು ಮತ್ತೊಂದು ಬಿರುದು

ಕೆಲ ದಿನಗಳ ಹಿಂದೆ ದುಬೈನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೆ ಕಿಚ್ಚ ಸುದೀಪ್​​ ಅವರ ವಿಕ್ರಾಂತ್ ರೋಣ ಚಿತ್ರದ ಲೋಗೋ ಮತ್ತು ಕನ್ನಡದ ಬಾವುಟವನ್ನು ಪ್ರದರ್ಶಿಸಿ ಸುದೀಪ್​​ ಅವರ 25 ವರ್ಷಗಳ ಹೆಜ್ಜೆ ಗುರುತುಗಳನ್ನು ತೋರಿಸಲಾಗಿತ್ತು.

ಕಿಚ್ಚ ಸುದೀಪ್​ಗೆ ಸಿಕ್ತು ಮತ್ತೊಂದು ಬಿರುದು

ಇನ್ನು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಹಾಗೂ ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳು ಕಿಚ್ಚ ಸುದೀಪ್ ಅವರ 25 ವರ್ಷಗಳ ಸಿನಿಮಾ ಸೇವೆ ಗುರುತಿಸಿ 'ಕನ್ನಡ ಕಲಾ ತಿಲಕ' ಎಂಬ ಬಿರುದು ನೀಡಿ ಸನ್ಮಾನಿಸಿದೆ.

ಕನ್ನಡ ಕಲಾ ತಿಲಕ ಸುದೀಪ್​​​ ಹೊಸ ಬಿರುದು

ABOUT THE AUTHOR

...view details