ಕರ್ನಾಟಕ

karnataka

ETV Bharat / sitara

ಪೈಲ್ವಾನ್​​​ ನೋಡಿ ಕಣ್ಣೀರಿಟ್ಟ ಸುದೀಪ್​​​​ ಪತ್ನಿ ಹಾಗೂ ಪುತ್ರಿ... ಯಾಕೆ ಗೊತ್ತಾ? - ಸುದೀಪ್​ ಮಗಳು ಕಣ್ಣೀರು

ಅಭಿಮಾನಿಗಳ ಜೊತೆಗೆ ಪೈಲ್ವಾನ್ ಸಿನಿಮಾ ವೀಕ್ಷಿಸಿದ ಸುದೀಪ್ ಮಗಳು ಸಾನ್ವಿ ಕಣ್ಣೀರಿಟ್ಟಿದ್ದಾಳೆ. ಕೇವಲ ಸಾನ್ವಿ ಮಾತ್ರ ಅಲ್ಲ ಸುದೀಪ್​​​ ಪತ್ನಿ ಪ್ರಿಯಾ ಸುದೀಪ್‌ ಕೂಡ ಕಣ್ಣೀರಿಟ್ಟಿದ್ದಾರಂತೆ. ಇದನ್ನ ಸ್ವತಃ ಸಿನಿಮಾ ವೀಕ್ಷಣೆ ಬಳಿಕ ಸುದೀಪ್‌ ಹೇಳಿಕೊಂಡಿದ್ದಾರೆ. ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಆದ್ರೆ ಸಿನಿಮಾ ನೋಡ್ತಿರೋವಾಗ ನನ್ನ ಪುತ್ರಿ ಸಾನ್ವಿ ಹಾಗೂ ಪತ್ನಿ ಪ್ರಿಯಾ ಕಣ್ಣೀರು ಹಾಕಿದ್ರು ಎಂದರು.

ಸುದೀಪ್​ ಕುಟುಂಬ

By

Published : Sep 12, 2019, 5:06 PM IST

ಪೈಲ್ವಾನ್ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 4000 ಸ್ಕ್ರೀನ್​​ಗಳಲ್ಲಿ ತೆರೆ ಕಂಡು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಫಸ್ಟ್ ಡೇ ಫಸ್ಟ್ ಶೋ ನೋಡೋದಿಕ್ಕೆ ಕಿಚ್ಚ ಸುದೀಪ್, ಪತ್ನಿ ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿ ಕೆ.ಜಿ ರಸ್ತೆಯಲ್ಲಿರೋ ಸಂತೋಷ್ ಚಿತ್ರಮಂದಿರಕ್ಕೆ ಬಂದಿದ್ರು.

ಅಭಿಮಾನಿಗಳ ಜೊತೆಗೆ ಪೈಲ್ವಾನ್ ಸಿನಿಮಾ ವೀಕ್ಷಿಸಿದ ಸುದೀಪ್ ಮಗಳು ಸಾನ್ವಿ ಕಣ್ಣೀರಿಟ್ಟಿದ್ದಾರೆ. ಕೇವಲ ಸಾನ್ವಿ ಮಾತ್ರ ಅಲ್ಲ ಸುದೀಪ್​​​ ಪತ್ನಿ ಪ್ರಿಯಾ ಸುದೀಪ್‌ ಕೂಡ ಕಣ್ಣೀರಿಟ್ಟಿದ್ದಾರಂತೆ. ಇದನ್ನ ಸ್ವತಃ ಸಿನಿಮಾ ವೀಕ್ಷಣೆ ಬಳಿಕ ಸುದೀಪ್‌ ಹೇಳಿಕೊಂಡಿದ್ದಾರೆ.

ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಆದ್ರೆ ಸಿನಿಮಾ ನೋಡ್ತಿರೋವಾಗ ನನ್ನ ಪುತ್ರಿ ಸಾನ್ವಿ ಹಾಗೂ ಪತ್ನಿ ಪ್ರಿಯಾ ಕಣ್ಣೀರು ಹಾಕಿದ್ರು. ಯಾರೂ ಕೂಡ ತಮ್ಮ ಅಪ್ಪ ಬೇರೆಯವ್ರ ಕೈನಿಂದ ಹೊಡೆಸಿಕೊಂಡು ರಕ್ತ ಸುರಿಸಿಕೊಂಡು ಒದ್ದಾಡೋದನ್ನ ನೋಡೋಕೆ ಇಷ್ಟ ಪಡೋದಿಲ್ಲ. ಆ ದೃಶ್ಯ ನೋಡಿದಾಗ ನನ್ನ ಮಗಳು ಭಾವುಕಳಾಗಿದ್ದಾಳೆ ಎಂದ್ರು.

ಹಾಗೇ ನಿರ್ದೇಶಕ ಕೃಷ್ಣ, ನಿರ್ಮಾಪಕಿ ಸ್ವಪ್ನ ಕೃಷ್ಣ ಕೂಡ ಮೊದಲ ಶೋ ನೋಡಿ ಎಮೋಷನಲ್​​​ ಆದ್ರಂತೆ. ಮೈ ಆಟೋಗ್ರಾಫ್ ಸಿನಿಮಾ ನಂತ್ರ ದೊಡ್ಡ ಮಟ್ಟದಲ್ಲಿ ಪ್ರಶಂಸೆ, ಖುಷಿ ಈ ಸಿನಿಮಾದಲ್ಲಿ ಸಿಕ್ತು ಅಂತಾ ಸ್ವತಃ ಕಿಚ್ಚ ಸುದೀಪ್ ಹೇಳಿದ್ದಾರೆ.

ABOUT THE AUTHOR

...view details