ಕರ್ನಾಟಕ

karnataka

ETV Bharat / sitara

ಜೂನ್ 19 ರಂದು 'ಕಿಚ್ಚನ ಮಾತುಕತೆ ಗಲ್ಫ್ ಕನ್ನಡಿಗರ ಜೊತೆ' - Kiccha video call with Gulf fans

ಜೂನ್ 13 ರಂದು ಸುಮಾರು 18 ದೇಶಗಳ ವಿದೇಶಿ ಕನ್ನಡಿಗರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಕಿಚ್ಚ ಸುದೀಪ್, ಜೂನ್ 19 ರಂದು ಗಲ್ಫ್​ ಕನ್ನಡಿಗರೊಂದಿಗೆ ಜೂಮ್ ಮೂಲಕ ಮಾತನಾಡಲಿದ್ದಾರೆ.

Sudeep chit chat with Gulf Kannadigas
ಕಿಚ್ಚ ಸುದೀಪ್

By

Published : Jun 18, 2020, 11:25 AM IST

ಸ್ಟಾರ್​​​ಗಳು, ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿರುತ್ತಾರೆ. ಕೆಲವು ಸ್ಟಾರ್​ಗಳು ಫೇಸ್​​ಬುಕ್ ಲೈವ್​​​ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದರೆ ಮತ್ತೆ ಕೆಲವೊಮ್ಮೆ ವಿಡಿಯೋ ಕಾಲ್ ಮೂಲಕ ಚಿಟ್​​​ಚಾಟ್ ಮಾಡುತ್ತಾರೆ.

ಕಿಚ್ಚ ಸುದೀಪ್ ಕೂಡಾ ಆಗ್ಗಾಗ್ಗೆ ವಿದೇಶಿ ಅಭಿಮಾನಿಗಳೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿರುತ್ತಾರೆ. ಜೂನ್ 13 ರಂದು ಸುದೀಪ್ 18 ದೇಶಗಳ ಕನ್ನಡ ಅಭಿಮಾನಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಈಗ ಮತ್ತೆ ಜೂನ್ 19 ರಂದು ಅಂದರೆ ನಾಳೆ ಗಲ್ಫ್​ ದೇಶದಲ್ಲಿರುವ ಕನ್ನಡಿಗರೊಂದಿಗೆ ಮಾತನಾಡಲಿದ್ದಾರೆ.

ಸುದೀಪ್ ಅಭಿಮಾನಿಗಳು ತಯಾರಿಸಿರುವ ವಿಡಿಯೋ

ಈ ಚಿಟ್​​​ಚಾಟ್​​ ಬಗ್ಗೆ ಗಲ್ಫ್​​​​​​​​​​ ಕನ್ನಡಿಗರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಮಕ್ಕಳು ಕೂಡಾ ಸುದೀಪ್ ಅವರೊಂದಿಗೆ ಮಾತನಾಡಲು ಕಾಯುತ್ತಿರುವುದು ವಿಶೇಷ. ಈ ಚಿಟ್ ಚಾಟ್ ವೇಳೆ ಕನ್ನಡ ಭಾಷೆ ತಿಳಿಯದ ಮುಬಾರಕ್ ಅಲ್ ರಶೀದ್ ಎಂಬುವವರು ಕನ್ನಡ ಕಲಿತು ಕಿಚ್ಚ ಸುದೀಪ್ ಅವರ ಒಂದು ಹಾಡನ್ನು ಹಾಡಲು ಕಾಯುತ್ತಿದ್ದಾರೆ. ಇವರೊಂದಿಗೆ ತೆಲುಗು, ತಮಿಳು ಅಭಿಮಾನಿಗಳು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸುದೀಪ್ ಅಭಿಮಾನಿಗಳು ಕೂಡಾ ಈ ಲೈವ್ ಚಾಟ್​​​ನಲ್ಲಿ ಸೇರಿಕೊಳ್ಳಲಿದ್ದಾರೆ.

ಜೂಮ್ ಮೂಲಕ ನಾಳೆ ಸಂಜೆ 5 ಗಂಟೆಗೆ ಕುವೈತ್​​​​​​​, ಕತಾರ್, ಬಹರೈನ್ ಹಾಗೂ ಸೌದಿ ಅರಬಿಯಾ ಅಭಿಮಾನಿಗಳು, 6 ಗಂಟೆಗೆ ಒಮನ್, ಯುಎಇ ಹಾಗೂ ದುಬೈ ರಾತ್ರಿ 7.30ಕ್ಕೆ ಭಾರತದ ಅಭಿಮಾನಿಗಳೊಂದಿಗೆ ಕೂಡಾ ಅಭಿನಯ ಚಕ್ರವರ್ತಿ ಮಾತನಾಡಲಿದ್ದಾರೆ.

ABOUT THE AUTHOR

...view details