ಬೆಂಗಳೂರು: ಪುರುಷರ ಪ್ರೀಮಿಯಂ ಫ್ರಾಗ್ರನ್ಸ್ ಬ್ರ್ಯಾಂಡ್ ಆಗಿರುವ ಭಾರತದ ಪ್ರಮುಖ ಖಾಸಗಿ ಡಿಯೋಡ್ರೆಂಟ್ ಮತ್ತು ಪುರುಷರ ಗ್ರೂಮಿಂಗ್ ಸಂಸ್ಥೆ ಡೆನ್ವರ್ ಕಂಪನಿ ಉತ್ಪನ್ನಗಳಿಗೆ ನಟ ಕಿಚ್ಚ ಸುದೀಪ್ ಹೊಸ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.
ಡೆನ್ವರ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಿಚ್ಚ ಸುದೀಪ್ ಆಯ್ಕೆ ಈ ಆಯ್ಕೆ ಕುರಿತು ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡೆನ್ವರ್ ಮಾರಾಟ ವಿಭಾಗದ ನಿರ್ದೇಶಕ ಸೌರಭ್ ಗುಪ್ತಾ ಹಾಗೂ ಕಿಚ್ಚ ಸುದೀಪ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಕೋವಿಡ್ ಸಮಯದಲ್ಲೂ ಎಲ್ಲ ಉದ್ಯೋಗಿಗಳಿಗೆ ಪೂರ್ತಿ ಸಂಬಳ ನೀಡಿ ಮಾನವೀಯತೆ ಮೆರೆದು, ಇನ್ನೂ ಹೆಚ್ಚು ಉದ್ಯೋಗಿಗಳಿಗೆ ಕೆಲಸ ನೀಡಿರುವ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ನಟ ಸುದೀಪ್ ಹೇಳಿದರು.
ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿ, ಆರಂಭದಿಂದಲೂ ಡೆನ್ವರ್ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಪ್ರಸಿದ್ಧ ಪ್ಲೇಯರ್ ಆಗಿ ಹೊರಹೊಮ್ಮುತ್ತ ಬಂದಿದೆ. ಜತೆಗೆ ಅನನ್ಯವಾಗಿರಲು ಸತತ ಪ್ರಯತ್ನಗಳನ್ನೂ ಮಾಡುತ್ತಿದೆ. ವಿಶೇಷವಾಗಿ ಯುವ ಗ್ರಾಹಕರನ್ನು ತಲುಪಲು ಎಲ್ಲ ರೀತಿಯ ಪ್ರಯತ್ನಗಳನ್ನು ಸಾಧಿಸುತ್ತಿದೆ. ಈ ರೀತಿಯ ಪ್ರಮುಖ ಬ್ರ್ಯಾಂಡ್‌ನೊಂದಿಗೆ ಪಾಲುದಾರಿಕೆ ಹೊಂದುತ್ತಿರುವುದಕ್ಕೆ ನನಗೆ ತುಂಬಾ ಸಂತಸವಾಗುತ್ತಿದೆ. ಈ ಬ್ರಾಂಡ್‌ನ ಬೆಳವಣಿಗೆಯ ಪಥದಲ್ಲಿ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ. ನಾನು ಡೆನ್ವರ್ನೊಂದಿಗೆ ಯಶಸ್ವಿ ಮತ್ತು ದೀರ್ಫಕಾಲೀನ ಸಹಭಾಗಿತ್ವವನ್ನು ಎದುರು ನೋಡುತ್ತಿದ್ದೇನೆ. ಈ ಬ್ರ್ಯಾಂಡ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪ್ರಯತ್ನ ನಡೆಸಲಿದ್ದೇನೆ ಎಂದರು.
ನಮ್ಮ ಬ್ರ್ಯಾಂಡ್ ಅಂಬಾಸಿಡರ್‌ಗಳಾದ ಶಾರುಖ್ ಖಾನ್ ಮತ್ತು ಮಹೇಶ್ ಬಾಬು ಅಂತಹ ಮೇರು ನಟರ ಜೊತೆಗಿನ ಸಹಯೋಗದಿಂದ ಹಿಂದಿ ಮಾತನಾಡುವ ಮತ್ತು ತೆಲುಗು ಭಾಷಿಕರು ಇರುವ ಪ್ರದೇಶಗಳಲ್ಲಿ ನಮ್ಮ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳುವ ಅದೃಷ್ಟ ಲಭಿಸಿದೆ. ಇದೀಗ ಕರ್ನಾಟಕದಲ್ಲಿಯೂ ನಮ್ಮ ಹೆಜ್ಜೆ ಗುರುತುಗಳನ್ನು ಅಚ್ಚಳಿಯದಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ನಿರ್ದೇಶಕ ಸೌರಭ್ ಗುಪ್ತಾ ತಿಳಿಸಿದರು.
ಇದನ್ನೂ ಓದಿ:‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎನ್ನುತ್ತಾ ಬರಲಿದ್ದಾರೆ ‘ಮನಸಾರೆ ಜೋಡಿ’
ಸ್ಯಾಂಡಲ್‌ವುಡ್‌ನಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ಸುದೀಪ್ ಅವರನ್ನು ಈಗ ಡೆನ್ವರ್ ಹೊಸ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಲು ನಮಗೆ ಸಂತೋಷವಾಗುತ್ತಿದೆ. ಕರ್ನಾಟಕದಲ್ಲಿ ಯುವಕರ ಐಕಾನ್ ಆಗಿರುವ ಕಿಚ್ಚ ಸುದೀಪ ನಮ್ಮ ಬ್ರಾಂಡ್‌ಗೆ ಸೂಕ್ತವಾದ ರಾಯಭಾರಿಯಾಗಿ ಹೊರಹೊಮ್ಮಿದ್ದಾರೆ. ಈ ಸಹಯೋಗವು ಹೆಚ್ಚಿನ ಗ್ರಾಹಕರನ್ನು ತಲುಪಲು ಸಹಾಯ ಮಾಡುತ್ತದೆ ಎಂಬುದನ್ನು ನಾವು ನಂಬಿದ್ದೇವೆ. ಇದರಿಂದ ಕರ್ನಾಟಕದಲ್ಲಿ ನಮ್ಮ ಬೆಳವಣಿಗೆ ಗಮನಾರ್ಹವಾದ ಪ್ರಮಾಣದಲ್ಲಿರುತ್ತದೆ. ಎಂಬ ವಿಶ್ವಾಸವೂ ನಮ್ಮದಾಗಿದೆ ಎಂದು ತಿಳಿಸಿದರು.