ಬೆಂಗಳೂರು:ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿನಯ ಚಕ್ರವರ್ತಿಯಾಗಿರುವ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ 50 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಬರ್ತಡೇ ಮೂಡ್ನಲ್ಲಿರುವ ಕಿಚ್ಚನಿಗೆ ವಿಕ್ರಾಂತ್ ರೋಣ ಚಿತ್ರತಂಡ ಸ್ಪೆಷಲ್ ಗಿಫ್ಟ್ ನೀಡಿದೆ. ಡೆಡ್ಮ್ಯಾನ್ ಆಂಥೆಮ್ ಟೀಸರ್ ಬಿಡುಗಡೆ ಮಾಡುವ ಮೂಲಕ ಸುದೀಪ್ಗೆ ಶುಭಾಶಯ ಕೋರಿದೆ. ಡೈರೆಕ್ಟರ್ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಸುದೀಪ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಒಂದಾನೊಂದು ಕಾಲದಲ್ಲಿ ಅಂತಾ ಶುರುವಾಗುವ, ಡೆಡ್ ಮ್ಯಾನ್ ಅಂಥೆಮ್ ಟೀಸರ್ನಲ್ಲಿ, ಸುದೀಪ್ ಎಂಟ್ರಿ, ಪಂಚಿಂಗ್ ಡೈಲಾಗ್ಗಳು ನೋಡುಗರನ್ನು ನಿಬ್ಬೆರಗಾಗಿಸುತ್ತವೆ. ಈಗಾಗಲೇ ಪೋಸ್ಟರ್ ಹಾಗೂ ಮೇಕಿಂಗ್ನಿಂದಲೇೇ ವಿಶ್ವದ ಗಮನ ಸೆಳೆದಿರುವ, ವಿಕ್ರಾಂತ್ ರೋಣ ಚಿತ್ರವನ್ನು, ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ.