ಕರ್ನಾಟಕ

karnataka

ETV Bharat / sitara

ಇದಕ್ಕೆ ಹುಚ್ಚು ಅಭಿಮಾನ ಅನ್ನೋದು : ಕಿಚ್ಚ ಸುದೀಪ್ ಬರುತ್ತಿದ್ದಂತೆ ಅಭಿಮಾನಿ ಮಾಡಿದ್ದೇನು? - Actor Sudeep

ಕೆಲವರು ನಟನೊಂದಿಗೆ ಸೆಲ್ಫಿಗೆ ಮುಗಿಬಿದ್ದು, ವೇದಿಕೆಗೆ ನುಗ್ಗಿದ್ದರು. ಇದೇ ವೇಳೆ ಬ್ಯಾರಿಕೇಡ್​ ಹಾರಿ ಪೊಲೀಸರ ಕಣ್ಣು ತಪ್ಪಿಸಿ ಓಡಿ ಬಂದ ಯುವಕ ನಟ ಸುದೀಪ್ ಇದ್ದ ಎಲಿಕ್ಯಾಪ್ಟರ್ ತಬ್ಬಿಕೊಂಡಾಗ ಪೊಲೀಸರು ಎಳೆದೊಯ್ದು ಥಳಿಸಿದ್ದಾರೆ..

kiccha sudeep
ಕಿಚ್ಚ ಸುದೀಪ್ ಬರುತ್ತಿದ್ದಂತೆ ಅಭಿಮಾನಿ ಮಾಡಿದ್ದೇನು?

By

Published : Feb 10, 2021, 7:15 PM IST

ದಾವಣಗೆರೆ: ನಟ ಕಿಚ್ಚ ಸುದೀಪ್ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದ ಹುಚ್ಚು ಅಭಿಮಾನಿಯೊಬ್ಬನ ಅತಿರೇಕದ ವಿಡಿಯೋ ವೈರಲ್ ಆಗಿದೆ. ಸುದೀಪ್‌ ಬಂದ ಹೆಲಿಕ್ಯಾಪ್ಟರ್ ಲ್ಯಾಂಡ್‌ ಆದ ತಕ್ಷಣವೇ ಓಡಿ ಹೋಗಿ ಕಾಪ್ಟರ್‌ನ ತಬ್ಬಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಿಚ್ಚ ಸುದೀಪ್ ಬರುತ್ತಿದ್ದಂತೆ ಅಭಿಮಾನಿ ಮಾಡಿದ್ದೇನು?

ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ನಟ ಸುದೀಪ್ ನೋಡಲು ಹೆಲಿಪ್ಯಾಡ್​ಗೆ ನೂರಾರು ಅಭಿಮಾನಿಗಳನ್ನು ತಡೆಯಲು ಪೋಲಿಸರು ಸುತ್ತಲೂ ಬ್ಯಾರಿಕೇಡ್‌ ಹಾಕಿದರೂ ಕೂಡ ಜನರನ್ನು ನಿಯಂತ್ರಿಸಲಾಗಲಿಲ್ಲ.

ಇನ್ನು, ಕೆಲವರು ನಟನೊಂದಿಗೆ ಸೆಲ್ಫಿಗೆ ಮುಗಿಬಿದ್ದು, ವೇದಿಕೆಗೆ ನುಗ್ಗಿದ್ದರು. ಇದೇ ವೇಳೆ ಬ್ಯಾರಿಕೇಡ್​ ಹಾರಿ ಪೊಲೀಸರ ಕಣ್ಣು ತಪ್ಪಿಸಿ ಓಡಿ ಬಂದ ಯುವಕ ನಟ ಸುದೀಪ್ ಇದ್ದ ಎಲಿಕ್ಯಾಪ್ಟರ್ ತಬ್ಬಿಕೊಂಡಾಗ ಪೊಲೀಸರು ಎಳೆದೊಯ್ದು ಥಳಿಸಿದ್ದಾರೆ. ಈ ರೀತಿ ಹುಚ್ಚು ಅಭಿಮಾನ ಮೆರೆದಿರುವ ಅಭಿಮಾನಿ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ABOUT THE AUTHOR

...view details