ಕರ್ನಾಟಕ

karnataka

ETV Bharat / sitara

'ರವಿ ಬೋಪಣ್ಣ' ಚಿತ್ರದಲ್ಲಿ ಕ್ರೇಜಿಸ್ಟಾರ್​​ ಜೊತೆಯಾದ್ರು ಲಾಯರ್​​​ ಸುದೀಪ್ - ಹಿರಿಯ ನಟ ರಾಮಕೃಷ್ಣ

ರವಿಚಂದ್ರನ್ ಅಭಿನಯದ 'ರವಿ ಬೋಪಣ್ಣ' ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಕಿಚ್ಚ ಸುದೀಪ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಲಾಯರ್ ಪಾತ್ರದಲ್ಲಿ ನಟಿಸಿರುವ ಕಿಚ್ಚ ತಮ್ಮ ಭಾಗದ ಚಿತ್ರೀಕರಣವನ್ನು ಎರಡು ದಿನಗಳಲ್ಲಿ ಮುಗಿಸಿಕೊಟ್ಟಿದ್ದಾರೆ.

ರವಿ ಬೋಪಣ್ಣ

By

Published : Aug 19, 2019, 11:47 AM IST

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿ ನಿರ್ದೇಶಿಸುತ್ತಿರುವ 'ರವಿ ಬೋಪಣ್ಣ' ಚಿತ್ರದ ಶೂಟಿಂಗ್ ನಿನ್ನೆಯಿಂದ ಆರಂಭವಾಗಿದೆ. ನಗರದ ಸೆಂಟ್ರಲ್ ಕಾಲೇಜಿನಲ್ಲಿ ಆರಂಭವಾಗಿರುವ ಮೊದಲ ದಿನದ ಶೂಟಿಂಗ್​​​​ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ. ಅಲ್ಲದೆ ಕಿಚ್ಚ ಕರಿಕೋಟು ಧರಿಸಿ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ.

'ರವಿ ಬೋಪಣ್ಣ' ಚಿತ್ರೀಕರಣ

ತಮ್ಮ ಭಾಗದ ಚಿತ್ರೀಕರಣವನ್ನು ಎರಡು ದಿನಗಳಲ್ಲಿ ಮುಗಿಸಿಕೊಟ್ಟಿದ್ದಾರೆ ಕಿಚ್ಚ. ಶೂಟಿಂಗ್ ಸೆಟ್​​​​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕ್ರೇಜಿಸ್ಟಾರ್​ ಸುದೀಪ್, ಅವರ ಪಾತ್ರದ ಬಗ್ಗೆ ವಿವರಿಸಿದರು. ನಾವು ಎಷ್ಟು ಚೆನ್ನಾಗಿ ಚಿತ್ರೀಕರಣ ಮಾಡಿದರೂ ಸುದೀಪ್ ಅವರ ಪಾತ್ರ ಚಿತ್ರದಲ್ಲಿ ಎಂಟ್ರಿ ಆದಾಗಲೇ ಸಿನಿಮಾ ಹೈಲೈಟ್ ಆಗಲಿದೆ. ಚಿತ್ರದ ಕೊನೆಯಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಾರೆ. ಆದರೆ ಈ ದಿನದ ಶೂಟಿಂಗ್ ಅವರಿಂದಲೇ ಶುರುವಾಗಿದೆ. ಯಾವ ಪಾತ್ರವೇ ಆಗಲಿ ಸುದೀಪ್ ಪರಕಾಯ ಪ್ರವೇಶ ಮಾಡಿ ನಟಿಸುತ್ತಾರೆ. ನನ್ನ ಮೇಲಿನ ಗೌರವಕ್ಕೆ ನನ್ನ ದೊಡ್ಡ ಮಗನಂತಿರುವ ಸುದೀಪ್ ನಾನು ಕರೆದ ತಕ್ಷಣ ಬಂದು ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಕಿಚ್ಚನ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದರು.

ರವಿಚಂದ್ರನ್, ಸುದೀಪ್

ನಂತರ ಮಾತನಾಡಿದ ಸುದೀಪ್ ರವಿ ಸರ್ ಮೇಲಿನ ಗೌರವಕ್ಕೆ ಈ ಚಿತ್ರದಲ್ಲಿ ನಟಿಸಿದ್ದೇನೆ. ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ, ಗೌರವವನ್ನು ನಾನು ಖಂಡಿತ ನ್ಯಾಯ ಕೊಡಬೇಕು. ರವಿ ಸರ್ ಒಂದು ಕ್ಷಣವೂ ಸಮಯ ವ್ಯರ್ಥ ಮಾಡದೆ ಲವಲವಿಕೆಯಿಂದ ಕೆಲಸ ಮಾಡುತ್ತಾರೆ. ಅವರನ್ನು ನೋಡಿ ನನಗೆ ಬಹಳ ಖುಷಿಯಾಯಿತು ಎಂದು ಹೇಳಿದರು. ಇನ್ನು ಸೆಂಟ್ರಲ್ ಕಾಲೇಜಿನಲ್ಲಿ ನಡೆಯುತ್ತಿದ್ದ ನ್ಯಾಯಾಲಯದ ದೃಶ್ಯದ ಚಿತ್ರೀಕರಣದಲ್ಲಿ ರವಿಶಂಕರ್ ಗೌಡ, ಹಿರಿಯ ನಟ ರಾಮಕೃಷ್ಣ, ಜೈಜಗದೀಶ್ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದರು.

ಲಾಯರ್ ಪಾತ್ರದಲ್ಲಿ ಸುದೀಪ್

ABOUT THE AUTHOR

...view details