ಕರ್ನಾಟಕ

karnataka

ETV Bharat / sitara

ಇದು ನಮ್ಮೆಲ್ಲರಿಗೂ ಸತ್ವ ಪರೀಕ್ಷೆಯ ವರ್ಷ, ಎಲ್ಲರೂ ಒಗಟ್ಟಿನಿಂದ ಇರೋಣ...ನಟ ಸುದೀಪ್ - Anup Bhandari Direction Phantom

ನಟ ಸುದೀಪ್ ತೆಲಂಗಾಣದ ಹೈದರಾಬಾದ್​​ನಲ್ಲಿ 'ಫ್ಯಾಂಟಮ್​​' ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ನಿನ್ನೆ ಎಲ್ಲರಿಗೂ ಹಬ್ಬದ ಶುಭ ಕೋರುತ್ತಾ 'ಇದು ನಮ್ಮೆಲ್ಲರಿಗೂ ಸತ್ವ ಪರೀಕ್ಷೆಯ ವರ್ಷ ಎಲ್ಲರೂ ಒಟ್ಟಾಗಿ ಸೇರಿ ಈ ಕಷ್ಟವನ್ನು ಎದುರಿಸೋಣ' ಎಂದು ತಮ್ಮ ಟ್ವಿಟ್ಟರ್​​​ನಲ್ಲಿ ಬರೆದುಕೊಂಡಿದ್ದಾರೆ.

Sandalwood Abhinya chakravarthy
ಸುದೀಪ್

By

Published : Aug 1, 2020, 9:39 AM IST

ನಿನ್ನೆಯಷ್ಟೇ ರಾಜ್ಯಾದ್ಯಂತ ಎಲ್ಲರೂ ವರಮಹಾಲಕ್ಷ್ಮಿ ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಸೆಲಬ್ರಿಟಿಗಳು ರಾಜ್ಯದ ಜನತೆಗೆ ಹಬ್ಬದ ಶುಭಾಶಯ ಕೋರಿದ್ದರು. ನಟ ಸುದೀಪ್ ಕೂಡಾ ಎಲ್ಲರಿಗೂ ಹಬ್ಬದ ಶುಭ ಕೋರಿ 'ಇದು ಸತ್ವ ಪರೀಕ್ಷೆಯ ವರ್ಷ ' ಎಂದು ಹೇಳಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೈದರಾಬಾದಿನಲ್ಲಿ 'ಫಾಂಟಮ್' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಜಾಕ್ ಮಂಜು ಈ ಚಿತ್ರಕ್ಕೆ ಭಾರೀ ಮೊತ್ತದ ಹಣ ಹೂಡಿದ್ದಾರೆ. ಸರ್ಕಾರ ಹೊರಡಿಸಿರುವ ಕೊರೊನಾ ನೀತಿ, ನಿಯಮಗಳನ್ನು ಪಾಲಿಸುತ್ತಾ ಸುದೀಪ್ ಹಾಗೂ ತಂಡ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ವಿಕ್ರಾಂತ್ ರೋಣ ಆಗಿ ಮಿಂಚಲಿದ್ದಾರೆ ಸುದೀಪ್.

ಅನೂಪ್ ಭಂಡಾರಿ 'ಫ್ಯಾಂಟಮ್' ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸುಮಾರು 3 ತಿಂಗಳ ಕಾಲ ಹೈದರಾಬಾದ್​​​ ಅನ್ನಪೂರ್ಣೇಶ್ವರಿ ಸ್ಟುಡಿಯೋನಲ್ಲಿ ಚಿತ್ರೀಕರಣ ಜರುಗಲಿದೆ. ಚಿತ್ರಕ್ಕೆ ಅಜನೀಶ್​​​​​​​​ ಲೋಕನಾಥ್ ಸಂಗೀತ ನೀಡಿದ್ದಾರೆ. 'ರಂಗಿತರಂಗ' ಹಾಗೂ ರಾಜರಥ ಚಿತ್ರಗಳಿಗೆ ನಿರ್ದೇಶಕ ಅನೂಪ್ ಭಂಡಾರಿ ಜೊತೆ ಇದ್ದ ಛಾಯಾಗ್ರಾಹಕ ವಿಲಿಯಂ ಡೇವಿಡ್ ಈ ಚಿತ್ರಕ್ಕೂ ಕ್ಯಾಮರಾ ಕೆಲಸ ಮಾಡುತ್ತಿದ್ದಾರೆ.

ಇನ್ನು ಸುದೀಪ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ನಿನ್ನೆ ಜನತೆಗೆ ಹಬ್ಬದ ಶುಭ ಕೋರಿದ್ಧಾರೆ. '2020 ಸತ್ವ ಪರೀಕ್ಷೆಯ ವರ್ಷ. ಸ್ವಲ್ಪ ಖುಷಿ, ಹೆಚ್ಚು ಕಷ್ಟಗಳನ್ನು ಕಂಡಿದ್ದೇವೆ. ದು:ಖದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಂತಿದ್ದೇವೆ. ಇದೇ ಪ್ರೀತಿ ನಂಬಿಕೆ ಮತ್ತು ಒಗ್ಗಟ್ಟಿನಿಂದ ಈ ವರ್ಷವನ್ನು ಕಳೆಯಬೇಕು ಮತ್ತು ಉಳಿಯಬೇಕು. ಆದಷ್ಟು ಬೇಗ ಎಲ್ಲರೂ ಮೊದಲಿನಂತಾಗೋಣ ' ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details