ಹೈದರಾಬಾದ್: ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತನಗೆ ಸಂಬಂಧಿಸಿದ ಯಾವ ವಸ್ತುವಾದರೂ ಸ್ಟೈಲಿಶ್ ಆಗಿರಬೇಕು ಎಂದು ಬಯಸುತ್ತಾರೆ. ಅದು ಅವರ ಮನೆಯಾಗಿರಬಹುದು, ವಾಹನವಾಗಿರಬಹುದು ಅಥವಾ ಯಾವುದಾದರೂ ಗ್ಯಾಡ್ಜೆಟ್ ಆಗಿರಬಹುದು.
ಇದೆಲ್ಲ ಸಾಧ್ಯವಾಗಿದ್ದು ಅಭಿಮಾನಿಗಳ ಪ್ರೀತಿಯಿಂದ್ಲೇ...ದುಬಾರಿ ವ್ಯಾನಿಟಿ ವ್ಯಾನ್ ಖರೀದಿಸಿದ ಸ್ಟೈಲಿಶ್ ಸ್ಟಾರ್..! - undefined
ನಟ ಅಲ್ಲು ಅರ್ಜುನ್ ಇತ್ತೀಚೆಗೆ ಸುಮಾರು 6 ಕೋಟಿ ರೂಪಾಯಿ ಮೊತ್ತದ ಕಾರವಾನ್ ಖರೀದಿಸಿದ್ದಾರೆ. ಇದಕ್ಕೆ FALCON ಎಂದು ಹೆಸರಿಟ್ಟಿದ್ದು ಜನರ ಪ್ರೀತಿಯಿಂದಲೇ ಇದನ್ನೆಲ್ಲ ಖರೀದಿಸಲು ಸಾಧ್ಯವಾಯಿತು ಎಂದು ಜನರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ಇದೀಗ ಬನ್ನಿ ದುಬಾರಿ ಮೊತ್ತದ ಲೇಟೆಸ್ಟ್ ಡಿಸೈನ್ ಹೊಂದಿರುವ ವ್ಯಾನಿಟಿ ವ್ಯಾನ್ವೊಂದನ್ನು ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ 6 ಕೋಟಿ ರೂಪಾಯಿ. ಈ ವ್ಯಾನ್ಗೆ ಅಲ್ಲು ಅರ್ಜುನ್ FALCON ಎಂದು ಹೆಸರಿಟ್ಟಿದ್ದಾರೆ. ವ್ಯಾನ್ ಒಳಗೆ ಮೆತ್ತನೆ ಸೋಫಾ, ಮಿನಿ ಥಿಯೇಟರ್, ಈಸಿ ಚೇರ್ಗಳು, ಟಾಯ್ಲೆಟ್, ರೆಫ್ರಿಜರೇಟರ್, ಮಸಾಜ್ ಬೆಡ್, ಮ್ಯೂಸಿಕ್ ಸಿಸ್ಟಮ್ ಹಾಗೂ ಇನ್ನಿತರ ಐಷಾರಾಮಿ ವಸ್ತುಗಳಿವೆ. ಇದರ ಕೆಲವೊಂದು ಪೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಬನ್ನಿ 'ಅಭಿಮಾನಿಗಳು ನನಗೆ ಸಾಕಷ್ಟು ಪ್ರೀತಿ ನೀಡಿದ್ದಾರೆ. ಇಂತಹ ದುಬಾರಿ ವಾಹನವನ್ನು ಖರೀದಿಸಿದ್ದು ನಿಮ್ಮ ಪ್ರೀತಿಯ ಫಲದಿಂದ. ನಿಮ್ಮೆಲ್ಲರಿಗೂ ಚಿರಕಾಲ ಕೃತಜ್ಞತೆ ಸಲ್ಲಿಸುತ್ತೇನೆ, ನಿಮ್ಮೆಲ್ಲರಿಗೂ ಧನ್ಯವಾದ ಎಂದು ತುಂಬುಹೃದಯದಿಂದ ಕೃತಜ್ಞತೆ ಸಲ್ಲಿಸಿದ್ದಾರೆ.
ಅಲ್ಲು ಅರ್ಜುನ್ ಸದ್ಯಕ್ಕೆ ತ್ರಿವಿಕ್ರಮ್, ಸುಕುಮಾರ್ ಹಾಗೂ ವೇಣು ಶ್ರೀರಾಮ್ ನಿರ್ದೇಶನದಲ್ಲಿ ಮೂರು ಹೊಸ ಸಿನಿಮಾಗಳ ತಯಾರಿಯಲ್ಲಿದ್ದಾರೆ. ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.