ಕರ್ನಾಟಕ

karnataka

ETV Bharat / sitara

ಲಾಕ್​ಡೌನ್ ಎಫೆಕ್ಟ್... ಜಮೀನಿನಲ್ಲಿ ರೈತನಾದ‌ ಸ್ಟಂಟ್ ಮಾಸ್ಟರ್ ರವಿವರ್ಮ! - ಲಾಕ್​ಡೌನ್ ಎಫೆಕ್ಟ್

ಬೇಡಿಕೆಯ ಸಾಹಸ ನಿರ್ದೇಶಕನಾಗಿರೋ ರವಿವರ್ಮ, ಕೈಯಲ್ಲಿ ಗುದ್ದಲಿ ಹಿಡಿದು, ತಮ್ಮ ಜಮೀನಿನಲ್ಲಿ ರೈತನಾಗಿದ್ದಾರೆ‌. ಬಿಡದಿ ಬಳಿಯಲ್ಲಿರೋ ತೋಟದಲ್ಲಿ ರವಿವರ್ಮ, ಗುದ್ದಲಿ ಹಿಡಿದು ತೋಟದ ಕೆಲಸಗಳನ್ನ ಮಾಡುತ್ತಿದ್ದಾರೆ.

ಸ್ಟಂಟ್ ಮಾಸ್ಟರ್ ರವಿವರ್ಮ
ಸ್ಟಂಟ್ ಮಾಸ್ಟರ್ ರವಿವರ್ಮ

By

Published : Jun 5, 2021, 1:28 PM IST

Updated : Jun 5, 2021, 2:29 PM IST

ಕೊರೊನಾ ಎಂಬ ಹೆಮ್ಮಾರಿಗೆ ರಾಜ್ಯದಲ್ಲಿ ಸೆಮಿ ಲಾಕ್‌ಡೌನ್ ಮಾಡಲಾಗಿದೆ. ಇದರ ಎಫೆಕ್ಟ್​ನಿಂದಾಗಿ, ಕಳೆದ ಒಂದು ತಿಂಗಳಿನಿಂದ‌ ಕನ್ನಡ ಚಿತ್ರರಂಗ ಕಂಪ್ಲೀಟ್ ಸ್ತಬ್ಧವಾಗಿದೆ. ಈ ಸಮಯದಲ್ಲಿ ಕೆಲ ಸಿನಿಮಾ ತಾರೆಯರು ಒಬ್ಬೊಬ್ಬರು ಒಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಜಮೀನಿನಲ್ಲಿ ರೈತನಾದ‌ ಸ್ಟಂಟ್ ಮಾಸ್ಟರ್ ರವಿವರ್ಮ

ಕೆಲ ಸ್ಟಾರ್ಸ್ ತಮ್ಮ ಫಾರಂ ಹೌಸ್​ನಲ್ಲಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ‌. ಮತ್ತೆ ಕೆಲವರು ಅದೇ ಫಾರಂ ಹೌಸ್ ಹಾಗೂ ಜಮೀನಿನಲ್ಲಿ ರೈತನಾಗಿದ್ದಾರೆ‌. ಇದೀಗ ಕನ್ನಡ ಚಿತ್ರರಂಗ ಅಲ್ಲದೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ, ಬೇಡಿಕೆಯ ಸಾಹಸ ನಿರ್ದೇಶಕನಾಗಿರೋ ರವಿವರ್ಮ, ಆಕ್ಷನ್ ಸಂಯೋಜನೆ ಮಾಡುವ ಕೈಯಲ್ಲಿ ಗುದ್ದಲಿ ಹಿಡಿದು ತಮ್ಮ ಜಮೀನಿನಲ್ಲಿ ರೈತನಾಗಿದ್ದಾರೆ‌.

ಶಿವಣ್ಣ ಜೊತೆ ಮಾಸ್ಟರ್ ರವಿವರ್ಮ

ಹೌದು, ಬಿಡದಿ ಬಳಿಯಲ್ಲಿರೋ ತೋಟದಲ್ಲಿ ರವಿವರ್ಮ, ಗುದ್ದಲಿ ಹಿಡಿದು ತೋಟದ ಕೆಲಸಗಳನ್ನ ಮಾಡುತ್ತಿದ್ದಾರೆ. ಜೆಸಿಬಿಯಲ್ಲಿ ಉಳುವ ಕೆಲಸದ ಜೊತೆಗೆ ತೆಂಗಿನ ಮರ ಹಾಗೂ ಮಾವಿನ‌ ಹಣ್ಣಿನ‌ ಸಸಿಗಳಿಗೆ ಕಳೆ ತೆಗೆಯುವ ಕೆಲಸಗಳನ್ನ ಮಾಡುವ ಮೂಲಕ ರವಿವರ್ಮ ರೈತನಾಗಿದ್ದಾರೆ‌.

ಇನ್ನು ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ ಹಾಗೂ ತಮಿಳಿನ ಸ್ಟಾರ್ ನಟರಿಗೂ ಸ್ಟಂಟ್ ಮಾಸ್ಟರ್ ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ರುಸ್ತುಂ ಸಿನಿಮಾ ಬಳಿಕ ರವಿವರ್ಮ ಒಂದು ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದು, ಮುಂದಿನ‌ ದಿನಗಳಲ್ಲಿ ಆಕ್ಷನ್ ಕಟ್ ಹೇಳೋದಿಕ್ಕೆ ರೆಡಿಯಾಗಿದ್ದಾರೆ.

Last Updated : Jun 5, 2021, 2:29 PM IST

ABOUT THE AUTHOR

...view details