ಉಗ್ರಂ ಹಾಗೂ ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ, ತನ್ನ ಪ್ರತಿಭೆಯನ್ನು ನಿರೂಪಿಸಿದ ನಿರ್ದೇಶಕ ಪ್ರಶಾಂತ್ ನೀಲ್. ಮಾತು ಕಡಿಮೆ, ಕೆಲಸ ಜಾಸ್ತಿ ಮಾಡುವ ಮಾಸ್ ಡೈರೆಕ್ಟರ್ ಸೃಜನಶೀಲ ನಿರ್ದೇಶಕ.
KGF ನಿರ್ದೇಶಕನಿಗೆ ಸ್ಟಂಟ್ ಮಾಸ್ಟರ್ ಪ್ರ್ಯಾಂಕ್! - Stunt Master Fool to KGF Director
ಸಲಾರ್ ಸಿನಿಮಾ ಚಿತ್ರೀಕರಣದ ಸಮಯದಲ್ಲಿ, ಪ್ರಶಾಂತ್ ನೀಲ್ಗೆ ಸ್ಟಂಟ್ ಮಾಸ್ಟರ್ ಫೂಲ್ ಮಾಡಿದ್ದಾರೆ. ಈ ಪ್ರ್ಯಾಂಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸದ್ಯ ಕೆಜಿಎಫ್ ಚಾಪ್ಟರ್ 2, ಸಲಾರ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಶಾಂತ್ ನೀಲ್ಗೆ ಸೆಟ್ನಲ್ಲಿ ಸ್ಟಂಟ್ ಮಾಸ್ಟರ್ ಪ್ರ್ಯಾಂಕ್ ಮಾಡಿದ್ದಾರೆ. ಸಿನಿಮಾ ಶೂಟಿಂಗ್ ಸ್ಪಾಟ್ನಲ್ಲಿ ಯಾವಾಗಲೂ ಸಿನಿಮಾ ಬಗ್ಗೆ ಯೋಚನೆ ಮಾಡುವ ಪ್ರಶಾಂತ್ ನೀಲ್, ಸ್ಟಂಟ್ ಮಾಸ್ಟರ್ ಮಾಡಿದ ಸ್ಟಂಟ್ಗೆ ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ.
ಸಲಾರ್ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಪ್ರಶಾಂತ್ ನೀಲ್ ಶೇಕ್ ಹ್ಯಾಂಡ್ ಮಾಡಿದಾಗ ಸ್ಟಂಟ್ ಮಾಸ್ಟರ್ ತಾವು ಧರಿಸಿದ್ದ ಪ್ಲಾಸ್ಟಿಕ್ ಕೈಯನ್ನು ಪ್ರಶಾಂತ್ ಕೈಗೆ ಕೊಟ್ಟಿದ್ದಾರೆ. ಆಗ ಪ್ರಶಾಂತ್ ನೀಲ್ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸುತ್ತಿದೆ.