ಕರ್ನಾಟಕ

karnataka

ETV Bharat / sitara

ನಾಗ್​ ಅಶ್ವಿನ್​ ಸಿನಿಮಾದಲ್ಲಿ ಪ್ರಭಾಸ್​​, ಬಿಗ್​ಬಿ, ದೀಪಿಕಾ ಪಡುಕೋಣೆ - prabhas latest news

ಇದು ನನ್ನ ಕನಸಿನ ಕಾಂಬಿನೇಷನ್​​. ಮೊದಲಿನಿಂದಲೂ ಈ ಮೂವರು ಖ್ಯಾತ ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಎಂದು ಕೊಂಡಿದ್ದೆ. ಅಲ್ಲದೆ ಕಥೆಯೂ ಕೂಡ ಇವರಿಗೆ ತಕ್ಕಂತೆ ಮಾಡಲಾಗಿದೆ..

ನಾಗ್​ ಅಶ್ವಿನ್​ ಸಿನಿಮಾದಲ್ಲಿ ಪ್ರಭಾಸ್​​, ಬಿಗ್​ಬಿ, ದೀಪಿಕಾ ಪಡುಕೋಣೆ
ನಾಗ್​ ಅಶ್ವಿನ್​ ಸಿನಿಮಾದಲ್ಲಿ ಪ್ರಭಾಸ್​​, ಬಿಗ್​ಬಿ, ದೀಪಿಕಾ ಪಡುಕೋಣೆ

By

Published : Feb 17, 2021, 3:50 PM IST

ತೆಲುಗಿನ ಖ್ಯಾತ ನಿರ್ದೇಶಕ ನಾಗ್​ ಅಶ್ವಿನ್​​ ಸದ್ಯ ದೊಡ್ಡ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಲೆಜೆಂಡರಿ ನಟ ಅಮಿತಾಬ್​​​​​ ಬಚ್ಚನ್​​, ನಟಿ ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್​​ರನ್ನು ಒಳಗೊಂಡ ಸಿನಿಮಾ ಒಂದನ್ನು ನಾಗ್​ ಮಾಡುತ್ತಿದ್ದಾರೆ.

ಇತ್ತೀಚೆಗೆ ಮಾತನಾಡಿರುವ ಅವರು, ಇದು ನನ್ನ ಕನಸಿನ ಕಾಂಬಿನೇಷನ್​​. ಮೊದಲಿನಿಂದಲೂ ಈ ಮೂವರು ಖ್ಯಾತ ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಎಂದು ಕೊಂಡಿದ್ದೆ.

ಅಲ್ಲದೆ ಕಥೆಯೂ ಕೂಡ ಇವರಿಗೆ ತಕ್ಕಂತೆ ಮಾಡಲಾಗಿದೆ ಎಂದು ನಾಗ್​​​​ ಅಶ್ವಿನ್​ ಹೇಳಿದ್ದಾರೆ. ಇನ್ನು, ಸಿನಿಮಾವನ್ನು ವೈಜಯಂತಿ ಸಿನಿಮಾ ಪ್ರೊಡಕ್ಷನ್​​ ಹೌಸ್​​ ನಿರ್ಮಾಣ ಮಾಡುತ್ತಿದೆ.

ಸದ್ಯ ಹೆಸರಿಸದ ಈ ಸಿನಿಮಾ ಪ್ರಿ ಪ್ರೊಡಕ್ಷನ್​​ ಹಂತದಲ್ಲಿದೆ. ಚಿತ್ರವನ್ನು 2022ಕ್ಕೆ ತೆರೆ ಮೇಲೆ ತರಲು ನಿರ್ದೇಶಕರು ಯೋಚಿಸಿದ್ದಾರಂತೆ. ಒಟ್ಟಾರೆ ಭಾರತದ ಪ್ಯಾನ್​​ ಇಂಡಿಯಾ ಸ್ಟಾರ್​​ಗಳಾದ ಬಿಗ್‌-​ಬಿ, ಪ್ರಭಾಸ್​​ ಮತ್ತ ದೀಪಿಕಾ ಪಡುಕೋಣೆಯನ್ನು ಒಂದೇ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ABOUT THE AUTHOR

...view details