ಕರ್ನಾಟಕ

karnataka

ETV Bharat / sitara

ನಾಳೆ ವರನಟನ ಹುಟ್ಟುಹಬ್ಬ: ಡಾ. ರಾಜ್​​ ಜಯಂತಿ ಆಚರಿಸಲಿರುವ ರಾಜ್ಯ ಸರ್ಕಾರ - undefined

ನಾಳೆ ಅಂದರೆ ಏಪ್ರಿಲ್ 24ರಂದು ಡಾ. ರಾಜ್​ ಹುಟ್ಟುಹಬ್ಬವಾಗಿದ್ದು, ರಾಜ್ಯ ಸರ್ಕಾರ ಡಾ. ರಾಜ್​ ಜಯಂತಿಯನ್ನು ಆಚರಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಡಾ. ರಾಜ್​​​

By

Published : Apr 23, 2019, 8:48 PM IST

ವರನಟ, ನಟಸಾರ್ವಭೌಮ ಡಾ. ರಾಜ್​​ಕುಮಾರ್ ಕೋಟ್ಯಂತರ ಕನ್ನಡಿಗರ ಆರಾಧ್ಯ ದೈವವಾಗಿದ್ದವರು. ಅವರ ಸರಳತೆ, ಅಮೋಘ ಅಭಿನಯದಿಂದ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳ ಕಾಲ ಕಲೆಗಾಗಿಯೇ ಜೀವನ ಮುಡಿಪಾಗಿಟ್ಟ ಕಲಾವಿದ ಅವರು. ಇಂದಿಗೂ ಕೂಡಾ ಕನ್ನಡ ಚಿತ್ರರಂಗ ಎಂದರೆ ಡಾ. ರಾಜ್ ಪರ್ಯಾಯ ಪದವಾಗಿ ನಿಲ್ಲುತ್ತಾರೆ. ಅಷ್ಟರ ಮಟ್ಟಿಗೆ ಅವರು ಅಜರಾಮರವಾಗಿ ನಿಂತಿದ್ದಾರೆ. ನಾಳೆ ಅಂದರೆ ಏಪ್ರಿಲ್ 24 ಅವರು ಹುಟ್ಟಿದ ದಿನ. ಇಡೀ ರಾಜ್ಯವೇ ಅಣ್ಣಾವ್ರ ಬರ್ತಡೇ ಆಚರಿಸಲು ಎದುರು ನೋಡುತ್ತಿದೆ. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅಭಿಮಾನಿ ದೇವರುಗಳು ವರನಟನನ್ನು ಸ್ಮರಿಸಿಕೊಳ್ಳುತ್ತಲೇ ಇರುತ್ತಾರೆ.

ಇನ್ನು ಮುಖ್ಯಮಂತ್ರಿ ಹೆಚ್​​​​​​​​​.ಡಿ.ಕುಮಾರಸ್ವಾಮಿ ಒಂದು ದಿನ ಮೊದಲೇ ಅಣ್ಣಾವ್ರ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. 'ಡಾ. ರಾಜ್​ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಅವರ ಔದಾರ್ಯ, ಅಂತಃಕರಣ, ಜೀವನ ಮೌಲ್ಯಗಳು ಅನುಕರಣೀಯ. ನಾಳೆ ಅವರ ಹುಟ್ಟುಹಬ್ಬ ಹಿನ್ನೆಲೆ ರಾಜ್ಯ ಸರ್ಕಾರದ ವತಿಯಿಂದ ರಾಜ್​​​​​​​​​​​​​​​​​​​​​ಕುಮಾರ್ ಜಯಂತಿಯನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಎಲ್ಲರೂ ಭಾಗವಹಿಸಿ ಎಂದು ಸಿಎಂ ತಮ್ಮ ಅಫಿಷಿಯಲ್ ಟ್ವಿಟರ್​​​ ಪೇಜ್​ನಲ್ಲಿ ಟ್ವೀಟ್ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details