ಕರ್ನಾಟಕ

karnataka

ETV Bharat / sitara

ಬ್ಯಾಂಕಾಕ್​ನಲ್ಲಿ 'ಕಾಣೆಯಾದವರ ಬಗ್ಗೆ ಪ್ರಕಟಣೆ'ಗೆ ಮುಹೂರ್ತ... - ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ

ಕನ್ನಡದ ನಾಲ್ಕು ಜನಪ್ರಿಯ ಹಾಗೂ ಹಿರಿಯ ನಟರುಗಳಾದ ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ ಹಾಗೂ ತಬಲಾ ನಾಣಿ ಮುಖ್ಯ ಭೂಮಿಕೆಯಲ್ಲಿರುವ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಹೆಸರಿನ ಹೊಸ ಕನ್ನಡ ಚಿತ್ರಕ್ಕೆ ಬ್ಯಾಂಕಾಕ್​ನಲ್ಲಿ ಮುಹೂರ್ತ ಮುಗಿದಿದೆ. ಸದ್ಯ ಇಲ್ಲೇ ಚಿತ್ರತಂಡ ಚಿತ್ರೀಕರಣ ಆರಂಭಿಸಿದ್ದು, ವರ್ಷದ ಕೊನೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

'ಕಾಣೆಯಾದವರ ಬಗ್ಗೆ ಪ್ರಕಟಣೆ

By

Published : Aug 14, 2019, 1:11 PM IST

ಒಂದು ಕಡೆ ಬ್ಯಾಂಕಾಕ್​ನಲ್ಲಿ ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಮತ್ತೊಂದು ಕಡೆ ಗಲ್ಲಾಪೆಟ್ಟಿಗೆಯಲ್ಲಿ ಅನೇಕ ಸಿನೆಮಾಗಳು ಸೋಲು ಕಾಣುತ್ತಿದೆ. ಆದರೆ, ಪ್ರಯತ್ನ, ಹೊಸ ಅನ್ವೇಷಣೆ, ಹೈ ಕ್ಲಾಸ್ ಚಿಂತನೆಗೆ ಸ್ಯಾಂಡಲ್​ವುಡ್​ನಲ್ಲಿ ಕಡಿಮೆಯೇನೂ ಇಲ್ಲ ಬಿಡಿ.

‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಹೆಸರಿನ ಹೊಸ ಕನ್ನಡ ಚಿತ್ರ ಅನಿಲ್ ಕುಮಾರ್ ಅವರ ನಿರ್ದೇಶನದಲ್ಲಿ ಬ್ಯಾಂಕಾಕ್​ನಲ್ಲಿ ಮುಹೂರ್ತ ಮುಗಿಸಿದೆ. ಕನ್ನಡದ ನಾಲ್ಕು ಜನಪ್ರಿಯ ಹಿರಿಯ ನಟರುಗಳಾದ ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ ಹಾಗೂ ತಬಲಾ ನಾಣಿ ಪ್ರಮುಖ ಪಾತ್ರ ನಿರ್ವಹಿಸುವ ಈ ಚಿತ್ರ, ಹಿರಿಯ ನಾಗರಿಕರ ಬದುಕು ಹಾಗೂ ಕನಸುಗಳ ಕುರಿತ ಕಥೆಯಾಗಿದೆ. ಅನಿಲ್ ಕುಮಾರ್ ಸಂಭಾಷಣೆಕಾರರಾಗಿ ಬಂದು ಶಕ್ತಿ, ದಿಲ್​ವಾಲ, ಕೃಷ್ಣ ರುಕ್ಕು, ರ‍್ಯಾಂಬೋ -2 ಚಿತ್ರಗಳನ್ನು ನಿರ್ದೇಶಿಸಿದವರು. ಈಗ ಹಿರಿಯ ನಾಗರಿಕರ ಬಗ್ಗೆ ಮತ್ತು ಹಾಸ್ಯದ ಹೊಳೆಯಲ್ಲಿ ಸಿನಿಮಾ ಕಟ್ಟಿಕೊಡಲಿದ್ದಾರೆ. ವಿಶೇಷವೆಂದರೆ ಅವರೇ ಕಥೆ, ಚಿತ್ರಕಥೆ ಬರೆದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಕಾಣೆಯಾದವರ ಬಗ್ಗೆ ಪ್ರಕಟಣೆ

ಬಿಲ್ವ ಎಂಟರ್​ಟೈನ್ಮೆಂಟ್ ಅಡಿ ನವೀನ್ ಕುಮಾರ್ ಜಿ. ಆರ್. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮುಹೂರ್ತ ಆಚರಿಸಿಕೊಡು 16 ದಿನಗಳ ಕಾಲ ಚಿತ್ರತಂಡ ಬ್ಯಾಂಕಾಕ್​ನಲ್ಲಿ ಚಿತ್ರೀಕರಣಕ್ಕೆ ಬೀಡು ಬಿಟ್ಟಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಛಾಯಾಗ್ರಾಹಕರಾಗಿ ಶಿವಕುಮಾರ್ ಬಿ. ಕೆ ಹಾಗೂ ಕೆ ಎಂ ಪ್ರಕಾಶ್ ಸಂಕಲನವಿರುವ ಚಿತ್ರ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ABOUT THE AUTHOR

...view details