ಕರ್ನಾಟಕ

karnataka

ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗುತ್ತಿದೆ ಸ್ಟಾರ್ ನಟರ ನೇಮ್ ಬ್ರ್ಯಾಂಡ್

By

Published : Jun 6, 2019, 7:05 PM IST

ಒಂದು ಕಾಲದಲ್ಲಿ, ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ, ಬಿಗ್ ಬಜೆಟ್‍ ಸಿನಿಮಾ ಮಾಡಿದ್ರೆ ಬಂಡವಾಳ ವಾಪಸ್ ಬರುವುದಿಲ್ಲ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿರುವುದು ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ತಯಾರಾಗುತ್ತಿರುವ ಸಿನಿಮಾಗಳು ಹೇಳುತ್ತಿವೆ.

ನೇಮ್ ಬ್ರ್ಯಾಂಡ್

ಇದೀಗ ಸ್ಯಾಂಡಲ್​​​ವುಡ್ ಬದಲಾಗಿದೆ. ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ನೋಡುವಂತೆ ಮಾಡಿದೆ. ಬಾಕ್ಸ್​​ ಆಫೀಸ್ ಕೊಳ್ಳೆ ಹೊಡೆದ ಕೆಲವೊಂದು ಕನ್ನಡ ಸಿನಿಮಾಗಳನ್ನು ಪರಭಾಷೆ ನಿರ್ದೇಶಕ, ನಿರ್ಮಾಪಕರು ರೀಮೇಕ್ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ.

ಇನ್ನು ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಸ್ಟಾರ್ ನಟರ ಹೆಸರು ಬ್ರ್ಯಾಂಡ್ ಆಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಈ ಸ್ಟಾರ್ ನಟರ ಸಿನಿಮಾಗಳಲ್ಲಿ, ಈಗ ಕೌಂಟ್ರು ಡೈಲಾಗ್​​ಗಳಿಗಿಂತ ಈ ನಟರ ನೇಮ್ ಬ್ರ್ಯಾಂಡ್ ಟ್ರೆಂಡ್ ಹೆಚ್ಚಾಗುತ್ತಿದೆ.

'ಕೆಜಿಎಫ್​'

ನ್ಯಾಷನಲ್ ಲೆವೆಲ್​​​ನಲ್ಲಿ ಸೌಂಡ್ ಮಾಡಿದ 'ರಾಕಿ ಬಾಯ್'
ಈ ಸಾಲಿನಲ್ಲಿ ಕೆಜಿಎಫ್ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ಮುಂಚೂಣಿಯಲ್ಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದಲ್ಲಿ, ಬೈಕ್ ಮೇಲೆ ಯಶ್ ನೇಮ್ ಬ್ರ್ಯಾಂಡ್ ಬಳಸಲಾಗಿತ್ತು. ಕೆಜಿಎಫ್ ಸಿನಿಮಾದಲ್ಲಿ ಯಶ್ , ಸೂಪರ್ ಹೀರೋ ತರ, ಓಡಿಸುವ ಆ ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ 'ರಾಕಿ' ಎಂದು ಬರೆಸಲಾಗಿತ್ತು.ಈ ಹೆಸ್ರು ಯಶ್ ಅವ್ರ ರಾಕಿಂಗ್ ಸ್ಟಾರ್ ನೇಮ್ ಬ್ರ್ಯಾಂಡ್ ಆಗಿತ್ತು ಅನ್ನೋದು ಅಚ್ಚರಿ ವಿಷಯ.

'ಪೈಲ್ವಾನ್​'

'ಪೈಲ್ವಾನ್'ಚಿತ್ರದಲ್ಲಿದೆ 'K' ಎಂಬ ಕಿಚ್ಚ ನೇಮ್ ಬ್ರ್ಯಾಂಡ್
ಸ್ಯಾಂಡಲ್​​​ವುಡ್ ಮಾತ್ರವಲ್ಲದೆ ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲೇ ತನ್ನ ಟ್ಯಾಲೆಂಟ್ ತೋರಿಸಿರುವ , ಕಿಚ್ಚ ಸುದೀಪ್ ಮೊದಲ ಬಾರಿಗೆ ಪೈಲ್ವಾನ್ ಚಿತ್ರದಲ್ಲಿ ತಮ್ಮ ನೇಮ್ ಬ್ರ್ಯಾಂಡ್ ಬಳಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಪೈಲ್ವಾನ್' ಚಿತ್ರದ ಹೊಸ ಪೋಸ್ಟರ್​​ನಲ್ಲಿ ಬಾಕ್ಸಿಂಗ್ ಬೆಲ್ಟ್ ಮೇಲೆ ಕಿಚ್ಚ ಸುದೀಪ್ ಹೆಸರಿನ 'K' ಎಂಬ ಹೆಸರು ಬಳಸಲಾಗಿದೆ. ಇದು ನಿರ್ದೇಶಕ ಕೃಷ್ಣ ಅವರ ಕಲ್ಪನೆಯೋ ಏನೋ ಗೊತ್ತಿಲ್ಲ. ಆದರೆ ಈ 'K' ಹೆಸರು ಕಿಚ್ಚ ಸುದೀಪ್ ನೇಮ್ ಬ್ರ್ಯಾಂಡ್ ಅಂತ ಇಡೀ ಭಾರತೀಯ ಚಿತ್ರರಂಗಕ್ಕೆ ಸಾರಿ ಹೇಳುತ್ತಿದೆ.

'ರಾಬರ್ಟ್'

'ರಾಬರ್ಟ್'ಚಿತ್ರದ ಮೇಲಿದೆ ಚಾಲೆಂಜಿಂಗ್ ಸ್ಟಾರ್ ಪ್ರಭಾವ
ಯಶ್ ಹಾಗು ಸುದೀಪ್ ಸಿನಿಮಾ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲೂ, ನೇಮ್ ಬ್ರ್ಯಾಂಡ್ ಟ್ರೆಂಡ್​ ಮುಂದುವರೆದಿದೆ. ಸದ್ಯಕ್ಕೆ ದರ್ಶನ್ 'ರಾಬರ್ಟ್' ಅವತಾರ ತಾಳಿರುವ ಚಿತ್ರದ ಪೋಸ್ಟರ್​​ನಲ್ಲಿ 'ಡಿ ಬಾಸ್ ' ಎಂಬ ನೇಮ್ ಬ್ರ್ಯಾಂಡ್ ಹೆಚ್ಚು ಸೌಂಡ್ ಮಾಡುತ್ತಿದೆ. ಅಷ್ಟೇ ಅಲ್ಲ, ಬ್ಯಾಕ್​ಪೋಸ್​​ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್​​ನಲ್ಲಿ 'ಆನೆ ನಡೆದಿದ್ದೇ ದಾರಿ' ಎಂಬ ಗಜನ ಫೋಟೋವಿದೆ.

'ಯುವರತ್ನ'

​​​​​​​'ಯುವರತ್ನ' ಚಿತ್ರದಲ್ಲಿದೆ ಪವರ್ ಸ್ಟಾರ್ ನೇಮ್ ಬ್ರ್ಯಾಂಡ್

ಇನ್ನು ಪವರ್ ಸ್ಟಾರ್ ಪುನೀತ್ ರಾಜ್​​​​​​​ಕುಮಾರ್ ಅಭಿನಯಿಸುತ್ತಿರುವ 'ಯುವರತ್ನ' ಸಿನಿಮಾದಲ್ಲಿ, ರಾಜಕುಮಾರನ ನೇಮ್ ಬ್ರ್ಯಾಂಡ್ ಬಳಸಲಾಗಿದೆ. ಪುನೀತ್ ರಾಜ್​​​​​​​ಕುಮಾರ್ ಬೈಕ್​​​​​​​​​​​​​​​​​​ ನಂಬರ್ ಪ್ಲೇಟ್​​​​​​​​​​​​​​​​​​​​​​​​​​​ನಲ್ಲಿ PS ಎಂಬ ಹೆಸರಿನ, ಜೊತೆಗೆ ಇದು ಅವರ ಎಷ್ಟನೇ ಸಿನಿಮಾ ಅನ್ನೋದನ್ನೂ ಆ ಬೈಕ್ ನಂಬರ್ ಪ್ಲೇಟ್ ಮೇಲೆ ಹಾಕಲಾಗಿದೆ. ಇದು ನಿರ್ದೇಶಕ ಆನಂದ್ ರಾಮ್ ಅವ್ರ ಐಡಿಯಾ ಅನ್ನೋದು ಅಪ್ಪು ಆಪ್ತರ ಮಾತು.

ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ, ಆ ಸ್ಟಾರ್ ನಟರ ಸಿನಿಮಾಗಳಲ್ಲಿ, ಬೈಕ್ ಮೇಲೆ ಅಥವಾ ಕಾಸ್ಟೂಮ್​​​​​​​​​​​​ನಲ್ಲಿ, ನಟನ ಹೆಸರಿನ ಶುರುವಾಗುವ ಅಕ್ಷರ ಬಳಸುವ ಟ್ರೆಂಡ್​​​​​​​​​ ಹೆಚ್ಚಾಗುತ್ತಿದೆ ಅನ್ನೋದಕ್ಕೆ ಈ ಸ್ಟಾರ್ ನಟರ ಸಿನಿಮಾಗಳು ಉತ್ತಮ ಉದಾಹರಣೆ ಎನ್ನಬಹುದು.

For All Latest Updates

TAGGED:

ABOUT THE AUTHOR

...view details