ಸ್ಟಾರ್ಗಳ ಮನೆಯಲ್ಲಿ ಏನು ಜರುಗಿದರೂ ಅದು ದೊಡ್ಡ ವಿಷಯ. ಅವರು ನಿಂತರೂ ಸುದ್ದಿ ಕೂತರೂ ಸುದ್ದಿ. ಇದೀಗ ಸ್ಟಾರ್ನಟನ ಫಾರ್ಮ್ಹೌಸ್ನಲ್ಲಿ ಕುದುರೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು ಆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಟಾರ್ ನಟನ ಫಾರ್ಮ್ಹೌಸ್ನಲ್ಲಿ ಕುದುರೆ ಮರಿ ಜನನ; ಹೆಸರು ಸೂಚಿಸುವಂತೆ ಕೇಳಿದ ನಟನ ಪತ್ನಿ - undefined
ತೆಲುಗುನಟ ರಾಮ್ಚರಣ್ ತೇಜ ಅವರ ಫಾರ್ಮ್ಹೌಸ್ನಲ್ಲಿ ಕುದುರೆಯೊಂದು ಹೆಣ್ಣುಮರಿಗೆ ಜನ್ಮ ನೀಡಿದೆ. ಪತ್ನಿ ಉಪಾಸನಾ ಕೊನಿಡೇಲ ಕುದುರೆಮರಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದು ಅದಕ್ಕೆ ಹೆಸರು ಸೂಚಿಸುವಂತೆ ಅಭಿಮಾನಿಗಳಲ್ಲಿ ಕೇಳಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರ ಫಾರ್ಮ್ಹೌಸ್ನಲ್ಲಿ ಕುದುರೆಯೊಂದು ನಿನ್ನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಕುದುರೆ ಹಾಗೂ ಅದರ ಮರಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿರುವ ರಾಮ್ಚರಣ್ ಪತ್ನಿ ಉಪಾಸನಾ ಕೊನಿಡೇಲ, ಆ ಮರಿಗೆ ಹೆಸರೊಂದನ್ನು ಸೂಚಿಸುವಂತೆ ಅಭಿಮಾನಿಗಳ ಬಳಿ ಕೇಳಿದ್ದಾರೆ. ಫೋಟೋ ನೋಡಿ ಒಬ್ಬೊಬ್ಬರು ಒಂದೊಂದು ಹೆಸರು ಸೂಚಿಸಿದ್ದರೆ ಮತ್ತೆ ಕೆಲವರು ಆದಷ್ಟು ಬೇಗ ಜ್ಯೂನಿಯರ್ ರಾಮ್ಚರಣ್ನನ್ನು ನಮಗೆ ತೋರಿಸಿ ಎಂದು ಕಮೆಂಟ್ ಮಾಡಿದ್ದಾರೆ.
ಉಪಾಸನಾ ಕೊನಿಡೇಲ, ಅಪೋಲೋ ಗ್ರೂಪ್ ಆಫ್ ಕಂಪನಿಯ ಛೇರ್ಮ್ಯಾನ್ ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳು. 2012 ರಂದು ಉಪಾಸನಾ ಮೆಗಾಸ್ಟಾರ್ ಪುತ್ರ ರಾಮ್ಚರಣ್ ತೇಜ ಅವರನ್ನು ವಿವಾಹವಾದರು. ಸದ್ಯಕ್ಕೆ ಉಪಾಸನಾ ಅಪೋಲೋ ಸಂಸ್ಥೆಯ ಉಪಾಧ್ಯಕ್ಷೆ ಆಗಿ ಆಕೆ ಕಾರ್ಯ ನಿರ್ವಹಿಸುತ್ತಿದ್ದಾರೆ.