ಕರ್ನಾಟಕ

karnataka

By

Published : Apr 29, 2019, 9:26 AM IST

ETV Bharat / sitara

ಸೋಷಿಯಲ್ ಮೀಡಿಯಾದಲ್ಲೀಗ ಸ್ಟಾರ್ ನಟರ ತದ್ರೂಪಿಗಳದ್ದೇ ಸೌಂಡ್​​​​​​​..!

ಡಬ್​​ಸ್ಮ್ಯಾಶ್ ನಂತರ ಇದೀಗ ಟಿಕ್​​​ಟಾಕ್​ ಬಹುತೇಕ ಎಲ್ಲರ ಮೊಬೈಲನ್ನು ಆವರಿಸಿದೆ. ಇತ್ತೀಚಿನ ದಿನಗಳಲ್ಲಿ ಸ್ಟಾರ್​ ನಟರ ತದ್ರೂಪಿಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಿಕ್​​​ಟಾಕ್​​

ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚೀನಾ ಮೂಲದ ಜನಪ್ರಿಯ ಮೊಬೈಲ್ ಅಪ್ಲಿಕೇಷನ್ ಟಿಕ್ಟಾಕ್​​​​​​​ನದ್ದೇ ಸದ್ದು. ಅಲ್ಪಾವಧಿಯಲ್ಲಿ ಡೈಲಾಗ್ ಹಾಗೂ ವಿಡಿಯೋಗಳನ್ನು ಡಬ್ ಮಾಡಿ ಶೇರ್ ಮಾಡುವ ಈ ಆ್ಯಪ್ ಎಲ್ಲಾ ವಯೋಮಾನದವರ ಅಚ್ಚುಮೆಚ್ಚು.

ಸ್ಟಾರ್​​​ ನಟರ ತದ್ರೂಪಿಗಳ ಟಿಕ್​​​ಟಾಕ್​​ ವಿಡಿಯೋ

ಫೇಸ್​​​​​​​​​​​​​​​​​​​​​​​​​​​​​​​​​​​​​​​​​ಬುಕ್​​, ಟ್ವಿಟರ್, ಇನ್​​ಸ್ಟಾಗ್ರಾಂ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲೂ ಟಿಕ್​​​​​​​​​​​​ಟಾಕ್​​ನದ್ದೇ ಅಬ್ಬರ. ಇದರ ಜೊತೆಗೆ ಟಿಕ್​​​​​​​​​​​​ಟಾಕ್​​​​ ಅದೆಷ್ಟೋ ತೆರೆಮರೆಯಲ್ಲಿದ್ದ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಹೊರತರುವ ವೇದಿಕೆಯಾಗಿದೆ. ಇತ್ತೀಚೆಗೆ ಸ್ಟಾರ್ ನಟರ ತದ್ರೂಪಿಗಳ ಟಿಕ್​​​​ಟಾಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿದವರು ನಿಜಕ್ಕೂ ಒಂದು ಕ್ಷಣ ಶಾಕ್ ಆಗುವುದಂತೂ ಗ್ಯಾರಂಟಿ.

ಸಾಹಸಸಿಂಹ ಡಾ. ವಿಷ್ಣುವರ್ಧನ್​, ಕ್ರೇಜಿಸ್ಟಾರ್​​​​ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್​, ಕಿಚ್ಚ ಸುದೀಪ್​, ಟಾಲಿವುಡ್ ಸ್ಟಾರ್​​​ಗಳಾದ ಮೆಗಾಸ್ಟಾರ್ ಚಿರಂಜೀವಿ, ರಾಮ್​ಚರಣ್ ತೇಜ, ಮಹೇಶ್ ಬಾಬು, ಪ್ರಭಾಸ್, ಪವನ್ ಕಲ್ಯಾಣ್​, ಜ್ಯೂನಿಯರ್ ಎನ್​ಟಿಆರ್, ಸಮಂತಾ, ತಮಿಳಿನ ಧನುಷ್ ಹಾಗೂ ಇನ್ನಿತರ ಸ್ಟಾರ್​​​​ಗಳ ತದ್ರೂಪಿಗಳು ಈಗ ಟಿಕ್​​​ಟಾಕ್​​​​​​​​​​​​​​ನಲ್ಲಿ ಸ್ಟಾರ್​​ಗಳಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details