ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಒತ್ತಾಯಿಸುತ್ತ ಟ್ವೀಟ್ ಮಳೆ ಸುರಿಸುತ್ತಿದ್ದ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ, ಈಗ ಮತ್ತೊಂದು ಶಾಕಿಂಗ್ ಟ್ವೀಟ್ ಮಾಡಿದ್ದಾರೆ.
ರಜಪೂತ್ ಅವರು ಕೊಲೆಯಾದ ದಿನ ದುಬೈ ಕಂಪ್ಲೈಂಟ್ ಡ್ರಗ್ ವ್ಯಾಪಾರಿ ಅವರನ್ನು ಭೇಟಿಯಾಗಿದ್ದರು ಎಂದು ಸ್ವಾಮಿ ಸೋಮವಾರ ಟ್ವೀಟ್ ಮಾಡಿದ್ದಾರೆ.
"ಸುನಂದ ಪುಷ್ಕರ್ ಪ್ರಕರಣದಲ್ಲಿ ಏಮ್ಸ್ ವೈದ್ಯರು ಮರಣೋತ್ತರ ಸಮಯದಲ್ಲಿ ಅವರ ಹೊಟ್ಟೆಯಲ್ಲಿ ಕಂಡುಬಂದ ವಸ್ತುವಿನ ಬಗ್ಗೆ ಮರೆಮಾಚಿದ್ದಾರೆ. ಇದನ್ನು ಶ್ರೀದೇವಿ ಅಥವಾ ಸುಶಾಂತ್ ವಿಷಯದಲ್ಲಿ ಮಾಡಲಾಗಿಲ್ಲ. ಸುಶಾಂತ್ ಪ್ರಕರಣದಲ್ಲಿ, ದುಬೈನ ಕಂಪ್ಲೈಂಟ್ ಡ್ರಗ್ ವ್ಯಾಪಾರಿ ಅಯಾಶ್ ಖಾನ್ ಅವರು ಸುಶಾಂತ್ ಕೊಲೆಯ ದಿನ ಭೇಟಿ ಮಾಡಿದ್ದರು, ಅದು ಯಾಕೆ? " ಎಂದು ಸ್ವಾಮಿ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಸುನಂದ್ ಪುಷ್ಕರ್ ಮತ್ತು ಶ್ರೀದೇವಿ ಅವರ ಪ್ರಕರಣಗಳನ್ನು ಸ್ವಾಮಿ ಸುಶಾಂತ್ ಅವರೊಂದಿಗೆ ಜೋಡಿಸುವುದು ಇದೇ ಮೊದಲಲ್ಲ. ಕಳೆದ ಗುರುವಾರ ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ ಸ್ವಾಮಿ, ಸುಶಾಂತ್ ಅವರ ಸಾವಿನ ಹಿಂದೆ ದುಬೈ ಲಿಂಕ್ ಇರುವ ಬಗ್ಗೆ ಸುಳಿವು ನೀಡಿದ್ದರು. ಅಲ್ಲದೇ ಸಿಬಿಐ ಕೂಡ ಸೂಪರ್ ಸ್ಟಾರ್ ಶ್ರೀದೇವಿ ಸೇರಿದಂತೆ ಹಿಂದಿನ ಉನ್ನತ ಸಾವಿನ ಪ್ರಕರಣಗಳ ಮೂಲಗಳನ್ನು ಹುಡುಕಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಶ್ರೀದೇವಿ, ಫೆಬ್ರವರಿ 24, 2018 ರಂದು ನಿಧನರಾದರು. ದುಬೈನ ಹೋಟೆಲ್ನ ಬಾತ್ ಟಬ್ನಲ್ಲಿ ಆಕಸ್ಮಿಕವಾಗಿ ಮುಳುಗಿಹೋಗಿ ಸಾವನ್ನಪ್ಪಿದರು ಎಂದು ಹೇಳಲಾಗಿದೆ.