ಕೊರೊನಾ ಕಾರಣದಿಂದ ಇಡೀ ಭಾರತದ ಚಿತ್ರರಂಗ ಸ್ತಬ್ಧವಾಗಿತ್ತು. ಇದೀಗ ಮೆಲ್ಲಗೆ ಚೇತರಿಕೆ ಕಾಣುತ್ತಿದ್ದು, ಸಿನಿಮಾ ಚಿತ್ರೀಕರಣದ ಕೆಲಸಗಳು ಭರದಿಂದ ಸಾಗುತ್ತಿವೆ.
ತೆಲುಗಿನ ಬಹು ನಿರೀಕ್ಷಿತ ಸಿನಿಮಾ ಆರ್ಆರ್ಆರ್ ಶೂಟಿಂಗ್ ಕೂಡ ಜೋರಾಗಿಯೇ ನಡೆಯುತ್ತಿದೆ. ಈಗಗಲೇ ರಾಮ್ ಚರಣ್ ಮತ್ತು ಜೂ. ಎನ್ಟಿಆರ್ ಅವರ ಎಂಟ್ರಿ ಮೋಷನ್ ಪೋಸ್ಟರ್ಗಳು ಎಲ್ಲರ ಗಮನ ಸೆಳೆದಿವೆ. ದೀಪಾವಳಿ ಹಬ್ಬಕ್ಕೂ ಬಿಡುವು ನೀಡದ ರಾಜಮೌಳಿ ಸಾರಥ್ಯದ ಆರ್ಆರ್ಆರ್ ಚಿತ್ರತಂಡ, ಹಬ್ಬದ ಸಡಗರದಲ್ಲೂ ಶೂಟಿಂಗ್ ಮಾಡುತ್ತಿದೆ.
ರಾಮ್ ಚರಣ್ ಮತ್ತು ಜೂ. ಎನ್ಟಿಆರ್ ಶೂಟಿಂಗ್ ಸೆಟ್ನಿಂದಲೇ ಬೆಳಕಿನ ಹಬ್ಬಕ್ಕೆ ಆರ್ಆರ್ಆರ್ ಚಿತ್ರತಂಡ ಶುಭ ಕೋರಿದೆ. ಸಾಂಪ್ರದಾಯಿಕ ಉಡುಪು ತೊಟ್ಟು ದೀಪಾವಳಿಗೆ ವಿಶ್ ಮಾಡಿರುವ ರಾಜಮೌಳಿ, ರಾಮ್ ಚರಣ್ ಮತ್ತು ಜೂ. ಎನ್ಟಿಆರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಈ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು, ದೀಪಾವಳಿ ಹಬ್ಬಕ್ಕೆ ಆರ್ಆರ್ಆರ್ ಜಿತ್ರತಂಡ ಶುಭ ಕೋರುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಬಾಹುಬಲಿ ಬಳಿಕ ನಿರ್ದೇಶಕ ರಾಜಮೌಳಿ ಈ ಸಿನಿಮಾ ಮಾಡುತ್ತಿದ್ದು, ಚಿತ್ರದಲ್ಲಿ ಬಾಲಿವುಡ್ ತಾರೆಯರಾದ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಕೂಡ ಕಾಣಿಸಲಿದ್ದಾರೆ.