ನಟಿ ಶ್ರುತಿ ಹರಿಹರನ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ಶ್ರುತಿ ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ಸ್ವತ: ಶ್ರುತಿ ಹರಿಹರನ್ ತಮ್ಮ ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾರೆ.
ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದ ಶ್ರುತಿ ಹರಿಹರನ್; ನಟಿಗೆ ಫ್ಯಾನ್ಸ್ ಶುಭಾಶಯ - undefined
ಮಿಟೂ ಆರೋಪದಿಂದಲೇ ಮನೆ ಮಾತಾದ ಶ್ರತಿ ಹರಿಹರನ್ ಈಗ ಗರ್ಭಿಣಿ. ಈ ವಿಷಯವನ್ನು ಸ್ವತ: ಶ್ರುತಿ ಹರಿಹರನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಭರತ ನಾಟ್ಯ ಕಲಾವಿದೆಯಾದ ಶ್ರುತಿ ಈ ಮುನ್ನ ಸಿನಿಮಾಗಳಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ನಂತರ ಆಕೆಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಪವನ್ ಕುಮಾರ್ ನಿರ್ದೇಶನದ 'ಲೂಸಿಯಾ' ಸಿನಿಮಾದಲ್ಲಿ ಮೊದಲ ಬಾರಿಗೆ ಅವರು ಕಾಣಿಸಿಕೊಂಡರು. ನಂತರ ದ್ಯಾವ್ರೇ, ಸವಾರಿ-2, ರಾಟೆ, ಪ್ಲಸ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಇನ್ನಿತರ ಸಿನಿಮಾಗಳಲ್ಲಿ ನಟಿಸಿದರು. ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ಶ್ರುತಿ ಮಿ-ಟೂ ಆರೋಪ ಮಾಡಿದ ವೇಳೆ ಶ್ರುತಿ ಬಹಳ ದಿನಗಳ ಮೊದಲೇ ಮದುವೆಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂತು.
ಬೇಬಿ ಬಂಪ್ನೊಂದಿಗೆ ಇರುವ ಫೋಟೊವೊಂದನ್ನು ಶೇರ್ ಮಾಡಿರುವ ಶ್ರುತಿ, 'ಮಗುವನ್ನು ನೋಡಲು ನಾವು ಕಾತರದಿಂದ ಕಾಯುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ಕೇರಳದ ಕಲರಿ ಪಯಟ್ಟು ಪಟು ರಾಮ್ ಕಲ್ಹಾರಿ ಅವರ ಕೈ ಹಿಡಿದಿರುವ ಶ್ರುತಿ ಹರಿಹರನ್ ಸದ್ಯಕ್ಕೆ 'ಮನೆ ಮಾರಾಟಕ್ಕಿದೆ' ಸಿನಿಮಾದಲ್ಲಿ ನಟಿಸಿದ್ದಾರೆ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ಆದರೆ ಈ ಸಿನಿಮಾಗೆ ಶ್ರುತಿ ಡಬ್ ಮಾಡಿಲ್ಲ, ಬದಲಿಗೆ ಆಕೆಗೆ ದೀಪು ಕಂಠದಾನ ನೀಡಿದ್ದಾರೆ. ಇಂದು ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದೆ.