ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​​ವುಡ್​​ನಲ್ಲಿ 'ಶ್ರೀರಂಗ'ನ ಪುರಾಣ... ಕೊರೊನಾ ಕಡಿಮೆ ಆದ್ಮೇಲೆ ದರ್ಶನ - ಶ್ರೀರಂಗ ಸಿನಿಮಾ ಬಿಡುಗಡೆ ದಿನಾಂಕ

ಶಿನವ, ರಚನಾ ರೈ ಮುಖ್ಯ ಭೂಮಿಕೆಯಲ್ಲಿರೋ 'ಶ್ರೀರಂಗ' ಸಿನಿಮಾ, ಬೆಂಗಳೂರು ಸುತ್ತಮುತ್ತ ತನ್ನ 21 ದಿನಗಳ ಚಿತ್ರೀಕರಣ ಮುಗಿಸಿ, ಕುಂಬಳಕಾಯಿ ಒಡೆದಿದೆ. ವಿಭಿನ್ನ ಹಾಸ್ಯ ಕಥಾಹಂದರ ಹೊಂದಿರುವ 'ಶ್ರೀರಂಗ' ಚಿತ್ರವನ್ನ ವೆಂಕಟ್ ಭಾರದ್ವಾಜ್ ನಿರ್ದೇಶಿಸಿದ್ದಾರೆ.

SriRanga kannada film Release
ಶ್ರೀರಂಗ ಕನ್ನಡ ಹೊಸ ಸಿನಿಮಾ

By

Published : Apr 20, 2021, 7:52 PM IST

ಸ್ಯಾಂಡಲ್​​ವುಡ್​ನಲ್ಲಿ ಸಾಕಷ್ಟು ಬಗೆಯ ಕಾಮಿಡಿ‌ ಜಾನರ್ ಸಿನಿಮಾಗಳು ಬಂದಿವೆ.‌ ಆದರೆ ಅದನ್ನು ತೋರಿಸುವ ಶೈಲಿ ಬೇರೆ ರೀತಿ ಇರುತ್ತೆ‌. ಸದ್ಯ 'ಶ್ರೀರಂಗ' ಅಂತಾ ಕ್ಯಾಚೀ ಟೈಟಲ್ ಇಟ್ಟುಕೊಂಡು ಚಂದನವನದಲ್ಲಿ ಚಿತ್ರವೊಂದು ತೆರೆ ಮೇಲೆ ಬರಲು ಸಿದ್ಧವಾಗಿದೆ.

ಶಿನವ, ರಚನಾ ರೈ

ಶಿನವ, ರಚನಾ ರೈ ಮುಖ್ಯ ಭೂಮಿಕೆಯಲ್ಲಿರೋ 'ಶ್ರೀರಂಗ' ಸಿನಿಮಾ, ಬೆಂಗಳೂರು ಸುತ್ತಮುತ್ತ ತನ್ನ 21 ದಿನಗಳ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದಿದೆ. ವಿಭಿನ್ನ ಹಾಸ್ಯ ಕಥಾಹಂದರ ಹೊಂದಿರುವ 'ಶ್ರೀರಂಗ' ಚಿತ್ರವನ್ನ ವೆಂಕಟ್ ಭಾರದ್ವಾಜ್ ನಿರ್ದೇಶಿಸಿದ್ದಾರೆ.

ಮುದ್ದು ಗೊಂಬೆ ರಚನಾ ರೈ

ಸದ್ಯ 'ಶ್ರೀರಂಗ'ನ ಹಿನ್ನೆಲೆ ಸಂಗೀತದ ಪ್ರಕ್ರಿಯೆ ನಡೆಯುತ್ತಿದ್ದು, ಚಿತ್ರದಲ್ಲಿ ಶಿನವ, ರಚನಾ ರೈ ಅಲ್ಲದೇ ಗುರುರಾಜ ಹೊಸಕೋಟೆ, ಯಮುನಾ ಶ್ರೀನಿಧಿ, ಮಾಸ್ಟರ್ ಚಿರಾಯು ಚಕ್ರವರ್ತಿ, ರೂಪ ರಾಯಪ್ಪ(ಕೆಜಿಎಫ್), ವಂದನಾ ಶೆಟ್ಟಿ, ಸಾಗರ್ ಜಯರಾಂ, ಸೂಪರ್ ದೇವು, ರಾಮಕೃಷ್ಣ, ಜ್ಯೋತಿ ಮೂರುರ್, ವೆಂಕಟ್ ಭಾರದ್ವಾಜ್​ರಂತಹ ದೊಡ್ಡ ತಾರಾಬಳಗವೇ ಇದೆ.

ರಚನಾ ರೈ

ಚಿತ್ರದ ಮೂರು ಹಾಡುಗಳಿಗೆ ಸಮೀತ್ ಕುಲಕರ್ಣಿ ಸಂಗೀತ ನೀಡಿದ್ದು, ಮಿಥುನ್ ಛಾಯಾಗ್ರಹಣ ಹಾಗೂ ಚಂದನ್ ಸಂಕಲನವಿದೆ. ಚಿತ್ರದ ಇಂಟ್ರೋಡಕ್ಷನ್ ಹಾಡನ್ನು ವಿರಾಜ್ ಕನ್ನಡಿಗ ಬರೆದು ಹಾಡಿದ್ದಾರೆ. ಶಂಕರ್ ರಾಮನ್ ಸಂಭಾಷಣೆ ಇರುವ ಚಿತ್ರವನ್ನು ರತು ಕ್ರಿಯೇಷನ್ಸ್ ಬ್ಯಾನರ್​ ಅಡಿ ಸುಮಾ ನಿರ್ಮಿಸುತ್ತಿದ್ದಾರೆ. ಕೊರೊನಾ ಕಡಿಮೆಯಾದ್ರೆ ಅಗಸ್ಟ್ ವೇಳೆ ತೆರೆ ಮೇಲೆ ಶ್ರೀರಂಗನ ದರ್ಶನವಾಗಲಿದೆ.

ಶಿನವ, ರಚನಾ ರೈ ಮುಖ್ಯ ಭೂಮಿಕೆಯಲ್ಲಿರೋ 'ಶ್ರೀರಂಗ'

ABOUT THE AUTHOR

...view details