ಶ್ರೀನಗರ ಕಿಟ್ಟಿ ನಾಯಕ ನಟ ಆಗಿದ್ದವರು ಕೂಡ ಆಗಾಗ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅವರು ಸದ್ಯ ಶರಣ್ ಅವರ ‘ಅವತಾರ್ ಪುರುಷ’ ಸಿನಿಮಾದಲ್ಲಿ ಗೆಸ್ಟ್ ರೋಲ್ನಲ್ಲಿ ನಟಿಸುತ್ತಿದ್ದಾರೆ.
ಸಿಂಪಲ್ ಸುನಿ ನಿರ್ದೇಶನ ಹಾಗೂ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣದ ‘ಅವತಾರ ಪುರುಷ’ ಸಿನಿಮಾದಲ್ಲಿ ಕಿಟ್ಟಿ ಒಡಿಶಾದ ಬ್ಲ್ಯಾಕ್ ಮ್ಯಾಜಿಶಿಯನ್ ಪಾತ್ರ ನಿರ್ವಹಿಸಿದ್ದಾರೆ. ‘ಅವತಾರ್ ಪುರುಷ’ ಚಿತ್ರದ ಓಟಕ್ಕೆ ಈ ಪಾತ್ರ ಬಹಳ ಮುಖ್ಯ ಆಗಿರುತ್ತದೆಯಂತೆ. ತೆರೆಯ ಮೇಲೆ ಕೆಲವು ನಿಮಿಷ ಮಾತ್ರ ಕಿಟ್ಟಿ ಕಾಣಿಸಕೊಳ್ಳಲಿದ್ದಾರಂತೆ.