ಕರ್ನಾಟಕ

karnataka

ETV Bharat / sitara

ರಿಯಲ್​ ಸ್ಟಾರ್​​​ಗೆ ವಿಲನ್ ಆದ ಶ್ರೀನಗರ ಕಿಟ್ಟಿ - Upendra starring Buddhivanta 2

ಬಹಳ ದಿನಗಳ ನಂತರ ಶ್ರೀನಗರ ಕಿಟ್ಟಿ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ವೀರಂ ಹಾಗೂ ಅವತಾರಪುರುಷ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಬುದ್ಧಿವಂತ 2 ಚಿತ್ರದಲ್ಲಿ ಉಪೇಂದ್ರ ಅವರ ಎದುರು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Srinagar kitty, Real star
ಶ್ರೀನಗರ ಕಿಟ್ಟಿ, ಉಪೇಂದ್ರ

By

Published : Feb 5, 2021, 9:30 AM IST

ಶ್ರೀನಗರ ಕಿಟ್ಟಿ ಅಭಿನಯದ ಸಿನಿಮಾವೊಂದು ಆರಂಭವಾಗಿ ನಾಲ್ಕು ವರ್ಷಗಳಾದರೂ ಇಂದಿಗೂ ಬಿಡುಗಡೆಯಾಗಿಲ್ಲ. 2017ರಲ್ಲಿ ಬಿಡುಗಡೆಯಾದ 'ಸಿಲಿಕಾನ್ ಸಿಟಿ' ಚಿತ್ರದ ನಂತರ ಕಿಟ್ಟಿ ಅವರ ಯಾವ ಹೊಸ ಸಿನಿಮಾ ಕೂಡಾ ಬಿಡುಗಡೆಯಾಗಿಲ್ಲ. ಈ ನಡುವೆ ಪ್ರಜ್ವಲ್ ಅಭಿನಯದ 'ವೀರಂ' ಮತ್ತು ಶರಣ್ ಅಭಿನಯದ 'ಅವತಾರ ಪುರುಷ' ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಮತ್ತೊಂದು ಚಿತ್ರದಲ್ಲಿ ಕೂಡಾ ಶ್ರೀನಗರ ಕಿಟ್ಟಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ಮತ್ತೆ ಬಣ್ಣ ಹಚ್ಚಲು ರೆಡಿಯಾದ್ರು ರಾಗಿಣಿ ದ್ವಿವೇದಿ

'ಬುದ್ಧಿವಂತ 2' ಚಿತ್ರದಲ್ಲಿ ಕೂಡಾ ಶ್ರೀನಗರ ಕಿಟ್ಟಿ ನಟಿಸುತ್ತಿದ್ದು ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀರೋ ಆಗಿದ್ದ ಒಬ್ಬ ನಟ, ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಕಡಿಮೆ ವಿಷಯವೇನಲ್ಲ. ಅದಕ್ಕೆ ಸಾಕಷ್ಟು ಧೈರ್ಯ ಬೇಕು ಮತ್ತು ಅಂಥದ್ದೊಂದು ಧೈರ್ಯವನ್ನು ಶ್ರೀನಗರ ಕಿಟ್ಟಿ ಪ್ರದರ್ಶಿಸಿದ್ದಾರೆ. ಉಪೇಂದ್ರ ಅಭಿನಯದ 'ಬುದ್ಧಿವಂತ 2' ಸಿನಿಮಾ ಲಾಕ್‍ಡೌನ್‍ಗೂ ಮುನ್ನವೇ ಬಹುತೇಕ ಮುಗಿದಿತ್ತು. ಆಗಲೇ ಶ್ರೀನಗರ ಕಿಟ್ಟಿ, ಚಿತ್ರೀಕರಣದಲ್ಲಿ ಭಾಗವಹಿಸಿ ತಮ್ಮ ಕೆಲಸವನ್ನು ಮುಗಿಸಿಕೊಟ್ಟಿದ್ದಾರಂತೆ. ಆದರೆ, ಈ ವಿಷಯವನ್ನು ಚಿತ್ರತಂಡ ಎಲ್ಲೂ ಹೇಳಿಕೊಂಡಿರಲಿಲ್ಲ. ಇದೀಗ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿರುವುದರಿಂದ ಸುದ್ದಿ ಹೊರಬಂದಿದೆ. 'ಬುದ್ಧಿವಂತ 2' ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪಾತ್ರವೇನು..? ಅವರ ಗೆಟಪ್ ಯಾವ ರೀತಿ ಇರುತ್ತದೆ...? ಅವರು ಸ್ಟೈಲಿಶ್ ಆಗಿರುತ್ತಾರೋ ಅಥವಾ ಖಡಕ್ ಆಗಿರುತ್ತಾರೋ? ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. 'ಬುದ್ಧಿವಂತ 2' ಚಿತ್ರವನ್ನು ಭದ್ರಾವತಿ ಜಯರಾಂ ನಿರ್ದೇಶನ ಮಾಡುತ್ತಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್​ ಅಡಿ ಟಿ.ಆರ್. ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಮೇ ಅಥವಾ ಜೂನ್‍ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ABOUT THE AUTHOR

...view details