ರೋರಿಂಗ್ ಸ್ಟಾರ್ ಶ್ರೀಮುರಳಿ ಇತ್ತೀಚೆಗೆ ಉಪೇಂದ್ರ ಅಣ್ಣನ ಪುತ್ರ ನಿರಂಜನ್ ಸುಧೀಂದ್ರ ನಟಿಸುತ್ತಿರುವ 'ಸೂಪರ್ ಸ್ಟಾರ್' ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಮುರಳಿ ತಮ್ಮ 14ನೇ ವಯಸ್ಸಿನಲ್ಲಿ ನಡೆದ ಒಂದು ವಿಚಾರವನ್ನು ಹೇಳಿಕೊಂಡಿದ್ದಾರೆ.
14 ವರ್ಷದವರಿರುವಾಗ ಆ ಚಿತ್ರವನ್ನು ಬ್ಲ್ಯಾಕ್ ಟಿಕೆಟ್ ಖರೀದಿಸಿ ನೋಡಿದ್ರಂತೆ ಶ್ರೀಮುರಳಿ - Sandalwood Agastya Srimurali
ಸ್ಯಾಂಡಲ್ವುಡ್ ಅಗಸ್ತ್ಯ ಶ್ರೀಮುರಳಿ, ಉಪೇಂದ್ರ ಅವರ ದೊಡ್ಡ ಅಭಿಮಾನಿಯಂತೆ. ಚಿಕ್ಕಂದಿನಿಂದಲೂ ಉಪೇಂದ್ರ ನಿರ್ದೇಶನದ ಸಿನಿಮಾಗಳನ್ನು ನೋಡುತ್ತಿದ್ದ ಶ್ರೀಮುರಳಿ ಉಪ್ಪಿ ಅಭಿನಯದ 'ಓಂ' ಚಿತ್ರವನ್ನು ಬ್ಲ್ಯಾಕ್ನಲ್ಲಿ ಟಿಕೆಟ್ ಖರೀದಿಸಿ ನೋಡಿದ್ರಂತೆ.
![14 ವರ್ಷದವರಿರುವಾಗ ಆ ಚಿತ್ರವನ್ನು ಬ್ಲ್ಯಾಕ್ ಟಿಕೆಟ್ ಖರೀದಿಸಿ ನೋಡಿದ್ರಂತೆ ಶ್ರೀಮುರಳಿ Srimurali about Upendra](https://etvbharatimages.akamaized.net/etvbharat/prod-images/768-512-8536246-392-8536246-1598263247968.jpg)
ರಿಯಲ್ ಸ್ಟಾರ್, ನಿರ್ದೇಶನದಿಂದ ನಟನೆಗೆ ಬಂದವರು. 'ಎ' ಚಿತ್ರದಲ್ಲಿ ಅವರು ನಾಯಕನಾಗಿ ನಟಿಸುವ ಮುನ್ನ ಸಾಕಷ್ಟು ಹಿಟ್ ಚಿತ್ರಗಳನ್ನು ಸ್ಯಾಂಡಲ್ವುಡ್ಗೆ ನೀಡಿದ್ದರು. ಉಪೇಂದ್ರ ನಿರ್ದೇಶನದ ಸಿನಿಮಾಗಳು ಎಂದರೆ ಸಿನಿಪ್ರಿಯರಿಗೆ ಬಹಳ ಇಷ್ಟ. ಅದೇ ರೀತಿ ಶ್ರೀಮುರಳಿ ಕೂಡಾ ಉಪೇಂದ್ರ ನಿರ್ದೇಶನದ ಸಿನಿಮಾವೊಂದರನ್ನು ಬ್ಲ್ಯಾಕ್ನಲ್ಲಿ ಟಿಕೆಟ್ ಖರೀದಿಸಿ ನೋಡಿದ್ದರಂತೆ. 1995 ರಲ್ಲಿ ಉಪೇಂದ್ರ ನಿರ್ದೇಶನದ 'ಓಂ' ಚಿತ್ರ ಬಿಡುಗಡೆ ಆದಾಗ ಶ್ರೀಮುರಳಿಗೆ 14 ವರ್ಷ ವಯಸ್ಸು. ಸಿನಿಮಾ ರಿಲೀಸ್ ಆದ ದಿನವೇ ಸ್ನೇಹಿತರ ಜೊತೆ ಸೇರಿ ಬ್ಲ್ಯಾಕ್ನಲ್ಲಿ ಟಿಕೆಟ್ ಖರೀದಿಸಿ ಶ್ರೀಮುರಳಿ ಉಪ್ಪಿ ನಿರ್ದೇಶನದಲ್ಲಿ ಶಿವಣ್ಣ ಅಭಿನಯದ 'ಓಂ' ಸಿನಿಮಾವನ್ನು ಗಾಂಧಿಗ್ಲಾಸ್ನಲ್ಲಿ ಕುಳಿತು ನೋಡಿ ಎಂಜಾಯ್ ಮಾಡಿದ್ದರಂತೆ.
'ಎ' ಸಿನಿಮಾ ಬಿಡುಗಡೆ ಆದಾಗ ಕೂಡಾ ಬೇಕಂತಲೇ ಗಾಂಧಿಕ್ಲಾಸ್ನಲ್ಲಿ ಟಿಕೆಟ್ ಖರೀದಿಸಿ ಸ್ನೇಹಿತರೊಂದಿಗೆ ಸಿನಿಮಾ ನೋಡಿದ್ದರಂತೆ ರೋರಿಂಗ್ ಸ್ಟಾರ್. ಈ ವಿಚಾರವನ್ನು ಶ್ರೀಮುರಳಿ 'ಸೂಪರ್ ಸ್ಟಾರ್' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಶ್ರೀಮುರಳಿ, ಸರ್ ಬೇಗ ಒಂದು ಸಿನಿಮಾ ನಿರ್ದೇಶನ ಮಾಡಿ, ಆ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ಕೊಡಿ ಎಂದು ಉಪೇಂದ್ರ ಬಳಿ ಕೇಳಿದ್ದಾರೆ.