ಕರ್ನಾಟಕ

karnataka

ETV Bharat / sitara

ಬಾಕ್ಸ್​​ ಆಫೀಸ್​​ ಲೂಟಿ ಮಾಡಿದ 'ಭರಾಟೆ'... ಅಭಿಮಾನಿಗಳಿಗೆ ರೋರಿಂಗ್​ ಸ್ಟಾರ್​​​​​​​​​​​​​​​ ಧನ್ಯವಾದ - ಸಿನಿಮಾ ಸಕ್ಸಸ್​​​​​​ಗೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಶ್ರೀಮುರಳಿ

'ಭರಾಟೆ' ಚಿತ್ರದಲ್ಲಿ ಶ್ರೀಮುರಳಿ ಮೊದಲ ಬಾರಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ಶ್ರೀಮುರಳಿ ಧನ್ಯವಾದ ಕೂಡಾ ಹೇಳಿದ್ದಾರೆ.

ಶ್ರೀಮುರಳಿ

By

Published : Oct 23, 2019, 10:02 PM IST

'ಮಫ್ತಿ' ಸಿನಿಮಾ ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ, ಮಾಸ್ ಲುಕ್​​​​​​ನಲ್ಲಿ ಕಾಣಿಸಿಕೊಂಡಿರುವ 'ಭರಾಟೆ' ಸಿನಿಮಾ ರಿಲೀಸ್ ಆದ 250 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದರ ಜೊತೆಗೆ ಬಾಕ್ಸ್​ ಆಫೀಸ್​​​​​​​​​​​​​ ಕೂಡಾ ಲೂಟಿ ಮಾಡಿದೆ.

'ಭರಾಟೆ' ಸಕ್ಸಸ್ ಮೀಟ್​

ಈ ಖುಷಿಯನ್ನು ಹಂಚಿಕೊಳ್ಳಲು ನಟ ಶ್ರೀಮುರಳಿ, ನಟಿ ಶ್ರೀಲೀಲಾ, ನಿರ್ದೇಶಕ ಚೇತನ್ ಕುಮಾರ್ ಹಾಗೂ ನಿರ್ಮಾಪಕ ಸುಪ್ರೀತ್, ಡೈಲಾಗ್ ಕಿಂಗ್ ಸಾಯಿಕುಮಾರ್, ನಟಿ ತಾರಾ ಸೇರಿದಂತೆ ಇಡೀ ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಹಾಜರಿತ್ತು. ಚಿತ್ರದಲ್ಲಿ ಶ್ರೀಮುರಳಿ ಮೊದಲ ಬಾರಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. 'ಭರಾಟೆ' ಸಿನಿಮಾದ ಯಶಸ್ಸು ನಮ್ಮ ಯಶಸ್ಸು ಮಾತ್ರವಲ್ಲ, ಅಭಿಮಾನಿಗಳ ಯಶಸ್ಸು ಎಂದು ಶ್ರೀಮುರಳಿ ಚಿತ್ರದ ಯಶಸ್ಸನ್ನು ಅಭಿಮಾನಿಗಳಿಗೆ ಅರ್ಪಿಸಿದರು. 'ರತ್ನಾಕರ' ಎಂಬ ವಯೋವೃದ್ಧನ ಪಾತ್ರದಲ್ಲಿ ಕೂಡಾ ಶ್ರೀಮುರಳಿ ನಟಿಸಿದ್ದು, ಈ ಪಾತ್ರಕ್ಕಾಗಿ ಸುಮಾರು 5 ಗಂಟೆಗಳ ಕಾಲ ಮೇಕಪ್​​​​ಗೆ ಕೂರುವುದು ನನಗೆ ಬಹಳ ಚಾಲೆಂಜಿಂಗ್ ಆಗಿತ್ತು ಎಂದು ಹೇಳಿಕೊಂಡಿದ್ದಾರೆ.

'ಭರಾಟೆ' ಸಕ್ಸಸ್ ಮೀಟ್​ನಲ್ಲಿ ಮಾತನಾಡುತ್ತಿರುವ ನಿರ್ಮಾಪಕ ಸುಪ್ರೀತ್

ಚಿತ್ರದ ನಾಯಕಿ ಶ್ರೀಲೀಲಾ ಮಾತನಾಡಿ, ಸಿನಿಮಾ ಸಕ್ಸಸ್ ನಂತರ ಮೈಸೂರು, ಮಂಡ್ಯ, ಮದ್ದೂರು ಚಿತ್ರಮಂದಿರಗಳಿಗೆ ಭೇಟಿ ನೀಡಿದಾಗ ಅಲ್ಲಿನ ಅಭಿಮಾನಿಗಳು ತಮ್ಮನ್ನು ಬರಮಾಡಿಕೊಂಡ ರೀತಿಯನ್ನು ನೆನೆದು ಬಹಳ ಸಂತೋಷ ವ್ಯಕ್ತಪಡಿಸಿದರು. 'ಬಹದ್ದೂರ್' ಹಾಗೂ ಭರ್ಜರಿಯಂತಹ ಹಿಟ್ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಚೇತನ್ ಕುಮಾರ್​​​​ಗೆ ಈ ಸಿನಿಮಾ ಯಶಸ್ಸು, ಖುಷಿ ಕೊಟ್ಟಿದೆಯಂತೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಮಾತನಾಡಿ, ನಾವು ಮೂವರೂ ಅಣ್ಣ-ತಮ್ಮಂದಿರು ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಿರುವುದು ನನಗೆ ಸಂತೋಷವಾಗಿದೆ ಎಂದರು. ಒಟ್ಟಿನಲ್ಲಿ 'ಭರಾಟೆ'ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ಎಷ್ಟು ಲಾಭ ಮಾಡಲಿದೆ ಎಂದು ಕಾದು ನೋಡಬೇಕು.

For All Latest Updates

ABOUT THE AUTHOR

...view details