ನಿನ್ನೆ ತೆರೆಕಂಡಿರುವ ತಮಿಳು ನಟ ಸೂರ್ಯ, ರಕುಲ್ ಪ್ರೀತ್ ಹಾಗೂ ಸಾಯಿ ಪಲ್ಲವಿ ನಟಿಸಿರುವ 'ಎನ್ಜಿಕೆ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ವಿವಾದಿತ ನಟಿ ಶ್ರೀರೆಡ್ಡಿ ರಕುಲ್ ಪ್ರೀತ್ ಅಭಿನಯಕ್ಕೆ ಕಳಪೆ ಅಂಕ ಕೊಟ್ಟಿದ್ದಾರೆ. ಎನ್ಜಿಕೆಯಲ್ಲಿ ನಿನ್ನ ನಟನೆ ಕೆಟ್ಟದ್ದಾಗಿದೆ. ಅದು ಎಷ್ಟರ ಮಟ್ಟಿಗೆ ಎಂದ್ರೆ, ನೋಡುಗರಿಗೆ ವಾಂತಿ ಬರಿಸುವಂತಿದೆ ಎಂದು ತೆಗಳಿದ್ದಾರೆ.
ಸಾಯಿಗೆ ಹೊಗಳಿ, ಬಾಲಿವುಡ್ ನಟಿಗೆ ತೆಗಳಿದ ನಟಿ ಶ್ರೀರೆಡ್ಡಿ - ತೆಗಳಿ
ಎನ್ಜಿಕೆ ಚಿತ್ರದಲ್ಲಿ ರಕುಲ್ ಪ್ರೀತ್ ಅಭಿನಯ ವಾಂತಿ ಬರಿಸುವಂತಿದೆ ಎಂದು ಟಾಲಿವುಡ್ ನಟಿ ಶ್ರೀರೆಡ್ಡಿ ಟೀಕೆ ಮಾಡಿದ್ದಾರೆ.
ಇದೇ ವೇಳೆ ಮತ್ತೋರ್ವ ನಟಿ ಸಾಯಿ ಪಲ್ಲವಿ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 'ಯು ರಾಕ್ಸ್ ಮೈ ರೌಡಿ ಬೇಬಿ' ಎಂದು ಪ್ರೇಮಂ ಬೆಡಗಿಯ ಅಭಿನಯ ಕೊಂಡಾಡಿದ್ದಾರೆ.
ಶ್ರೀರೆಡ್ಡಿ ಕಳೆದೆರಡು ವರ್ಷಗಳಿಂದ ಚಿತ್ರರಂಗದಲ್ಲಿ ಇದೇ ಎನ್ನಲಾದ ಕಾಸ್ಟಿಂಗ್ ಕೌಚ್ ಬಗ್ಗೆ ಹೋರಾಟ ನಡೆಸುತ್ತ ಬಂದಿದ್ದಾರೆ. ಈ ಹಿಂದೆ ರಕುಲ್ ಪ್ರೀತ್, ತೆಲುಗು ಚಿತ್ರರಂಗದಲ್ಲಿ ನನಗೆ ಅಂತಹ ಅನುಭವ ಆಗಿಲ್ಲ, ಅಲ್ಲಿ ಕಾಸ್ಟಿಂಗ್ ಕೌಚ್ ನುಸುಳಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಶ್ರೀರೆಡ್ಡಿ ಕೋಪಕ್ಕೆ ಕಾರಣವಾಗಿ, ರಕುಲ್ ಮೇಲೆ ಅಂದೇ ಹರಿಹಾಯ್ದಿದ್ದರು. ಇದೀಗ ಮತ್ತೊಮ್ಮೆ ರಕುಲ್ ಅಭಿನಯ ಕೆಟ್ಟದ್ದಾಗಿದೆ ಎಂದು ಜರಿದಿದ್ದಾರೆ.