ಕರ್ನಾಟಕ

karnataka

ETV Bharat / sitara

"ಸೈರಾ" ಸಿನಿಮಾಕ್ಕೆ ಬಳಸಲಾಗಿದೆಯಂತೆ ಈ ವಿಶೇಷ​ ಕ್ಯಾಮೆರಾ...! - ತೆಲುಗು ಸಿನಿಮಾ ಸೈರಾ

ಸೈರಾ ಸಿನಿಮಾದಲ್ಲಿ ಹಾಲಿವುಡ್​ ಸಿನಿಮಾಗಳಲ್ಲಿ ಬಳಸುವ ಸ್ಪೈಡರ್​ ಕ್ಯಾಮೆರಾಗಳನ್ನು ಬಳಸಲಾಗಿದೆ. ಜೊಲಾಡುವ ದೃಶ್ಯ, ಕುದುರೆ ಓಡಿ ಹೋಗುವ ದೃಶ್ಯಗಳು ಸೇರಿದಂತೆ ಪ್ರಮುಖ ಚಿತ್ರೀಕರಣದ ವೇಳೆ ಈ ಕ್ಯಾಮೆರಾವನ್ನು ಪ್ರಮುಖವಾಗಿ ಬಳಸಲಾಗಿದೆ.

ಸೈರಾ ಸಿನಿಮಾ ಪೋಸ್ಟರ್​​​​

By

Published : Sep 16, 2019, 8:41 AM IST

ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮೆಗಾ ಸ್ಟಾರ್​ ಅಂತಾನೆ ಕರೆಸಿಕೊಂಡಿರುವ ಚಿರಂಜೀವಿ ನಟಿಸುತ್ತಿರುವ ಸೈರಾ ಮೂವಿ ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸುತ್ತಲೇ ಬಂದಿದೆ. ಇನ್ನು ಈ ಸಿನಿಮಾಕ್ಕೆ ಬಳಸಿರುವ ತಂತ್ರಜ್ಞಾನ ಕೂಡ ತುಂಬಾ ಜೋರಾಗೆ ಇದೆ. ಅಲ್ಲದೇ ಇದೀಗ ಸಿನಿಮಾ ಛಾಯಾಗ್ರಾಹಕ ರತ್ನಮಾಲೆ ಹೊಸ ಮಾಹಿತಿಯೊಂದನ್ನ ಹೊರ ಹಾಕಿದ್ದಾರೆ.

ಈ ಸಿನಿಮಾದಲ್ಲಿ ವಿಶೇಷ ಕ್ಯಾಮರಾಗಳನ್ನು ಬಳಸಿಕೊಂಡಿದ್ದು, ಹಾಲಿವುಡ್​ ಸಿನಿಮಾಗಳಲ್ಲಿ ಬಳಸುವ ಸ್ಪೈಡರ್​ ಕ್ಯಾಮೆರಾಗಳನ್ನು ಬಳಸಲಾಗಿದೆ. ನಮ್ಮ ಸಿನಿಮಾದಲ್ಲಿ ಸ್ಪೈಡರ್​ ಕ್ಯಾಮ್​ ಬಹಳ ಮುಖ್ಯ ಪಾತ್ರ ವಹಿಸಿದ್ದು, ಜೊಲಾಡುವ ದೃಶ್ಯ, ಕುದುರೆ ಓಡಿ ಹೋಗುವ ದೃಶ್ಯಗಳು ಸೇರಿದಂತೆ ಪ್ರಮುಖ ಚಿತ್ರೀಕರಣದ ವೇಳೆ ಈ ಕ್ಯಾಮೆರಾ ಪ್ರಮುಖವಾಗಿ ಬಳಸಲಾಗಿದೆ ಎಂದು ರತ್ನಮಾಲೆ ಹೇಳಿದ್ದಾರೆ.

ಇನ್ನು ಸೈರಾ ಸಿನಿಮಾವನ್ನು ಬರೋಬ್ಬರಿ 300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾಕ್ಕೆ ಸುರೇಂದ್ರ ರೆಡ್ಡಿ ಆಕ್ಷನ್​ ಕಟ್​​ ಹೇಳಿದ್ದು, ಚಿರಂಜೀವಿ ಮಗ ರಾಮ್​​ ಚರಣ್​​ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ನಯನತಾರಾ, ಅಮಿತಾ ಬಚ್ಚನ್​​, ಕಿಚ್ಚ ಸುದೀಪ್​​ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಕಾಣಸಿಗಲಿದ್ದಾರೆ.

ABOUT THE AUTHOR

...view details