ಮಹಾನ್ ಗಾಯಕರಾದ ಎಸ್ ಪಿ ಬಾಲಸುಬ್ರಮಣ್ಯಂ ತನ್ನ ತಂದೆ ಶ್ರೀಪತಿ ಪಂಡಿತಾರಾಧ್ಯುಲು ಅವರ ಸ್ವಂತ ಮನೆಯನ್ನು ವೇದ ಶಾಲೆಯನ್ನಾಗಿ ಮಾಡಲು ಶ್ರೀ ಶಂಕರ ಮಠಕ್ಕೆ ದಾನವಾಗಿ ನೀಡಿದ್ದಾರೆ.
ತಮ್ಮ ತಂದೆಯ ಮನೆಯನ್ನು ಮಠಕ್ಕೆ ನೀಡಿದ್ರು ಎಸ್ಪಿಬಿ! - ತಮ್ಮ ತಂದೆಯ ಮನೆಯನ್ನು ಮಠಕ್ಕೆ ನೀಡಿದ್ರು ಎಸ್ಪಿಬಿ
ಎಸ್ ಪಿ ಬಾಲಸುಬ್ರಮಣ್ಯಂ ತನ್ನ ತಂದೆ ಶ್ರೀಪತಿ ಪಂಡಿತಾರಾಧ್ಯುಲು ಅವರ ಸ್ವಂತ ಮನೆಯನ್ನು ವೇದ ಶಾಲೆಯನ್ನಾಗಿ ಮಾಡಲು ಶ್ರೀ ಶಂಕರ ಮಠಕ್ಕೆ ದಾನವಾಗಿ ನೀಡಿದ್ದಾರೆ.
![ತಮ್ಮ ತಂದೆಯ ಮನೆಯನ್ನು ಮಠಕ್ಕೆ ನೀಡಿದ್ರು ಎಸ್ಪಿಬಿ! spg gave his father house to mutt](https://etvbharatimages.akamaized.net/etvbharat/prod-images/768-512-6078981-thumbnail-3x2-giri.jpg)
ಎಸ್ ಪಿ ಬಾಲಸುಬ್ರಮಣ್ಯಂ
ನೆಲ್ಲೂರಿನ ತಿಪ್ಪರಾಜುವರಿ ಬೀದಿಯಲ್ಲಿ ಇರುವ ಡಾ ಎಸ್ ಪಿ ಬಿ ಅವರ ಪಿತ್ರಾರ್ಜಿತ ಆಸ್ತಿಯ ಕಾಗದ ಪಾತ್ರವನ್ನು ಶ್ರೀ ಕಂಚಿ ಕಾಮಕೋಟಿ ಪೀಠಕ್ಕೆ ನೀಡಿದ್ದಾರೆ. ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ತಮ್ಮ ತಂದೆಯ ಮನೆಯನ್ನು ದಾನವಾಗಿ ಅರ್ಪಿಸಿದ್ದಾರೆ. ಇದೆ ಸಂದರ್ಭದಲ್ಲಿ ಶ್ರೀಪತಿ ಪಂಡಿತಾರಧ್ಯುಲು ಅವರ ಬಗ್ಗೆ ಶ್ರೀ ಶಂಕರ ಸರಸ್ವತಿ ಸ್ವಾಮೀಜಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಈ ರೀತಿ ದಾನವಾಗಿ ನೀಡಿರುವುದು ನನ್ನ ಪಾಲಿನ ಸೌಭಾಗ್ಯ ಎಂದು ಡಾ ಎಸ್ ಪಿ ಬಿ ನಮ್ರವಾಗಿಯೇ ಹೇಳಿಕೊಂಡಿದ್ದಾರೆ.