ಕಳೆದೊಂದು ವಾರದಿಂದ ಮೈಸೂರಿನಲ್ಲಿ ಶೂಟಿಂಗ್ ನಡೆಸಿದ ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಜೋಡಿಯ 'ಯುವ ರತ್ನ' ಚಿತ್ರ ಇಂದು ಅಲ್ಲಿಂದ ಪ್ಯಾಕಪ್ ಹೇಳಿದೆ.
'ಯುವರತ್ನ' ಶೂಟಿಂಗ್ ಸೆಟ್ನಲ್ಲೇ ಪವರ್ಸ್ಟಾರ್ಗೆ ಸ್ಪೆಷಲ್ ಗಿಫ್ಟ್! - news kannada
ಮಹಿಳಾ ಅಭಿಮಾನಿ ಬಳಗದಿಂದ ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಸ್ಪೆಷಲ್ ಗಿಫ್ಟ್ - ಅಭಿಮಾನಿ ದೇವರುಗಳ ಅಭಿಮಾನ ಕಂಡು ಮನಸೋತ ನಟ ಸಾಮ್ರಾಟ!
ಅಭಿಮಾನಿ ದೇವರುಗಳ ಅಭಿಮಾನ ಕಂಡು ಮನಸೋತ ಪುನೀತ್
ಮೈಸೂರಿನಲ್ಲಿ ಚಿತ್ರೀಕರಿಸಬೇಕಿದ್ದ ಎಲ್ಲ ಸೀನ್ಗಳನ್ನು ಚಿತ್ರ ತಂಡ ಕಂಪ್ಲೀಟ್ ಮಾಡಿದೆ. ಇಂದು ಶೆಡ್ಯೂಲ್ ಕಂಪ್ಲೀಟ್ ಆಗುತ್ತಿದ್ದಂತೆ ಸುದ್ದಿ ತಿಳಿದ ಅಪ್ಪು ಅಭಿಮಾನಿಗಳು ಸೆಟ್ನಲ್ಲಿ ಜಮಾಯಿಸಿದರು. ಈ ವೇಳೆ ಮಹಿಳಾ ಅಭಿಮಾನಿ ಬಳಗವು ಅಪ್ಪುಗೆ ಮರೆಯಲಾಗದ ಸ್ಪೆಷಲ್ ಗಿಫ್ಟ್ವೊಂದನ್ನು ನೀಡಿದೆ. ವರನಟ ರಾಜಕುಮಾರ್ ಅವರ ಫೋಟೋವೊಂದನ್ನು ನೀಡಿ ಸನ್ಮಾನಿಸಿದೆ. ಫೋಟೋ ಕಂಡು ಅಪ್ಪು ಮನಸೋತಿದ್ದಾರೆ. ಇದೇ ಖುಷಿಯಲ್ಲಿ ಅಭಿಮಾನಿಗಳ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.