ಕೆಜಿಎಫ್ ಚಾಪ್ಟರ್-2 ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿರುವ ಬಾಲಿವುಡ್ ನಟ ಸಂಜಯ್ ದತ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 62ನೇ ವಸಂತಕ್ಕೆ ಕಾಲಿಟ್ಟಿರುವ ಸಂಜು ಬಾಬಾನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.
ಕೆಜಿಎಫ್ ಚಾಪ್ಟರ್-2 ಸಿನಿಮಾದಲ್ಲಿ ಅಧೀರನಾಗಿ ಮಿಂಚಲಿರುವ ಸಂಜಯ್ ದತ್ಗೆ, ಅವರ ಹೊಸ ಪೋಸ್ಟರ್ ಅನಾವರಣ ಮಾಡುವ ಮೂಲಕ ಕೆಜಿಎಫ್ ಚಿತ್ರತಂಡ ಬರ್ತ್ ಡೇ ಉಡುಗೊರೆ ನೀಡಿದೆ. ಈ ಪೋಸ್ಟರ್ನಲ್ಲಿ ಸಂಜಯ್ ದತ್ ಕೈಯಲ್ಲಿ ಖಡ್ಗ ಹಿಡಿದು ಥೇಟ್ ಅಧೀರನಾಗಿ ಕಾಣುತ್ತಾರೆ. ಸಂಜಯ್ ದತ್ ಇದುವರೆಗೂ ಅಧೀರಾ ಎಂಬ ಕ್ರೇಜಿಯೆಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಈ ಪಾತ್ರಕ್ಕಾಗಿ ಸಂಜಯ್ ದತ್ ಹೆರ್ಸ್ಟೈಲ್ನಿಂದ ಹಿಡಿದು ಬಾಡಿ ಬಿಲ್ಡ್ ಮಾಡೋವರೆಗೂ ಸಾಕಷ್ಟು ಮೇಕೋವರ್ ಮಾಡಿದ್ದಾರೆ.