ಕರ್ನಾಟಕ

karnataka

ETV Bharat / sitara

ಈ ಪದ ಬದಲಿಸಲು ನಿಮ್ಮ ಅನುಮತಿ ಬೇಕು ಎಂದು ಕೇಳಿ ಸರಳತೆ ಮೆರೆದಿದ್ದ ಎಸ್​​​​ಪಿಬಿ - SPB respect for youngers

ತಾವು ಯಾವುದೇ ಹಾಡನ್ನು ರೆಕಾರ್ಡ್​ ಮಾಡುವ ವೇಳೆ ಆ ಹಾಡಿಗೆ ಬದಲಾವಣೆ ಬೇಕಿದ್ದಲ್ಲಿ ಸಾಹಿತ್ಯ ಬರೆದವರ ಅನುಮತಿ ಕೇಳುತ್ತಿದ್ದರಂತೆ ಎಸ್​​​​ಪಿಬಿ. ಅದೇ ರೀತಿ ಮಳವಳ್ಳಿ ಸಾಯಿಕೃಷ್ಣ ಅವರು ಬರೆದ ಹಾಡಿನಲ್ಲಿ ಒಂದೇ ಒಂದು ಪದ ಬದಲಾವಣೆ ಮಾಡಲು ಕರೆ ಮಾಡಿ ಕೇಳಿದ್ದರಂತೆ ಎಸ್​​​.ಪಿ. ಬಾಲಸುಬ್ರಹ್ಮಣ್ಯಂ.

SPB respect to youngers
ಎಸ್​.ಪಿ. ಬಾಲಸುಬ್ರಹ್ಮಣ್ಯಂ

By

Published : Sep 26, 2020, 3:12 PM IST

'ತುಂಬಿದ ಕೊಡ ತುಳುಕುವುದಿಲ್ಲ' ಎಂಬ ಮಾತು ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಬಹಳ ಚೆನ್ನಾಗಿ ಹೊಂದುತ್ತದೆ. ತಾವು ಎಷ್ಟು ದೊಡ್ಡ ಗಾಯರಾಗಿದ್ದರೂ, ಎಷ್ಟು ದೊಡ್ಡ ಸಾಧನೆ ಮಾಡಿದ್ದರೂ ಹೊಸ ಪ್ರತಿಭೆಗಳಿಗೆ ಹಾಗೂ ತಮಗಿಂತ ಕಿರಿಯವರಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಿದ್ದರು.

ಕನ್ನಡದ ಖ್ಯಾತ ಸಂಭಾಷಣೆಗಾರ, ಹಾಸ್ಯ ನಟ ಮಳವಳ್ಳಿ ಸಾಯಿಕೃಷ್ಣ 2016 ರಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಮಿ. ಮೊಮ್ಮಗ' ಚಿತ್ರಕ್ಕಾಗಿ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದರು. ಅದರೊಂದಿಗೆ ಚಿತ್ರಕ್ಕಾಗಿ ತಾತ-ಮೊಮ್ಮಗನ ಸೆಂಟಿಮೆಂಟ್ ಇರುವ ಹಾಡಿಗಾಗಿ ಮೊದಲೇ ರೆಡಿಯಿದ್ದ ಟ್ಯೂನ್​​​​ಗೆ ಆಕಾಶ ಚಂದ್ರಮ ಚಂದವಿಲ್ಲ ಅನಿಸಿದೆ... ಎಂಬ ಸಾಹಿತ್ಯ ಬರೆದಿದ್ದರು. ಈ ಹಾಡಿನ ರೆಕಾರ್ಡಿಂಗ್​​​ ಚೆನ್ನೈನಲ್ಲೇ ಎಸ್​​​​​​ಪಿಬಿ ಅವರ ಮನೆ ಬಳಿ ಇರುವ ಸ್ಟುಡಿಯೋದಲ್ಲಿ ನಡೆದಿತ್ತು.

ಎಸ್​​​​​ಪಿಬಿ ಸಾಮಾನ್ಯವಾಗಿ ಸಾಂಗ್​​ ರೆಕಾರ್ಡ್ ಮಾಡುವಾಗ ಆ ಹಾಡು ಬರೆದ ಸಾಹಿತಿ ಅಲ್ಲಿ ಇರಬೇಕು ಎಂದು ಬಯಸುತ್ತಾರೆ. ಆದರೆ ಕಾರಣಾಂತರಗಳಿಂದ ಮಳವಳ್ಳಿ ಸಾಯಿಕೃಷ್ಣ ಚೆನ್ನೈಗೆ ಹೋಗಲಾಗಲಿಲ್ಲ. ರೆಕಾರ್ಡಿಂಗ್ ವೇಳೆ ಸಾಹಿತಿ ಬಂದಿಲ್ಲ ಎಂದು ತಿಳಿದ ಎಸ್​​​​ಪಿಬಿ ಮಳವಳ್ಳಿ ಸಾಯಿಕೃಷ್ಣ ಅವರಿಗೆ ಕರೆ ಮಾಡಿ, ಈ ಹಾಡಿನಲ್ಲಿ ಒಂದೇ ಒಂದು ಪದ ಸರಿಯಾಗಿ ಬರುತ್ತಿಲ್ಲ, ಆ ಪದವನ್ನು ನಾನು ಬದಲಾವಣೆ ಮಾಡಬಹುದೇ...? ನೀವು ಅನುಮತಿ ನೀಡಿದರೆ ಬದಲಾಯಿಸುತ್ತೇನೆ ಎಂದು ಕೇಳಿದ್ದಾರೆ.

ಎಸ್​.ಪಿ. ಬಾಲಸುಬ್ರಹ್ಮಣ್ಯಂ

ಅಂತ ದೊಡ್ಡ ಗಾಯಕ ನಮ್ಮೊಂದಿಗೆ ಮಾತನಾಡುವುದೇ ನಮ್ಮ ಸೌಭಾಗ್ಯ. ಅವರು ಮನಸ್ಸು ಮಾಡಿದ್ದರೆ ಅ ಪದವನ್ನು ನನ್ನನ್ನು ಕೇಳದೆ ಬದಲಾವಣೆ ಮಾಡಬಹುದಿತ್ತು. ಆದರೆ ಅವರಿಗೆ ಸಾಹಿತಿಗಳ ಮೇಲಿನ ಗೌರವದಿಂದ ಹಾಗೂ ಒಂದು ವೇಳೆ ಅವರನ್ನು ಕೇಳದೆ ಪದ ಬದಲಿಸಿದರೆ ಸಾಹಿತಿಗೆ ಅವಮಾನವಾಗಹುದು ಎಂಬ ಕಾರಣದಿಂದ ಅದು ಯಾವ ಹಾಡೇ ಆಗಲಿ, ಆ ಹಾಡು ಬರೆದವರು ಹೊಸಬರಾಗಲಿ, ತಮಗಿಂತ ಬಹಳ ಕಿರಿಯರಾಗಲಿ ಅವರನ್ನು ಮಾತನಾಡಿಸಿ ಬದಲಾವಣೆ ಮಾಡಬೇಕಾಗಿದ್ದಲ್ಲಿ ಅವರನ್ನು ಕೇಳುತ್ತಿದ್ದರಂತೆ ಎಸ್​​​​ಪಿಬಿ.

ಈ ಘಟನೆಯನ್ನು ನೆನೆಸಿಕೊಂಡಿರುವ ಮಳವಳ್ಳಿ ಸಾಯಿಕೃಷ್ಣ, ಅಂತ ದೊಡ್ಡ ಸಾಧಕರು ನಮ್ಮಂತ ಕಲಾವಿದರಿಗೆ ಎಷ್ಟು ಗೌರವ ನೀಡುತ್ತಿದ್ದರು. ಅದನ್ನು ನೆನೆದರೆ ಇಂದಿಗೂ ಮೈ ರೋಮಾಂಚನವಾಗುತ್ತದೆ. ಅವರನ್ನು ಕಳೆದುಕೊಂಡಿರುವುದು ನಮ್ಮ ದುರಾದೃಷ್ಟ. ನಾನು ಬರೆದ 'ಮಿ.ಮೊಮ್ಮಗ' ಹಾಗೂ 'ಕಾಲೇಜ್ ಕಾಲೇಜ್' ಸಾಹಿತ್ಯ ಅವರ ಕಂಠದಲ್ಲಿ ಮೂಡಿ ಬಂದಿದ್ದು ನನ್ನ ಪುಣ್ಯ ಎನ್ನುತ್ತಾರೆ ಮಳವಳ್ಳಿ ಸಾಯಿಕೃಷ್ಣ.

ABOUT THE AUTHOR

...view details