ಕಿಚ್ಚ ಸುದೀಪ್ ಇಂದು ತುಂಬಾ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ಜೊತೆ ನಾನು ಮೊದಲ ಚಿತ್ರದಲ್ಲಿ ನಟಿಸಿದ್ದು ನನ್ನ ಪುಣ್ಯ ಎಂದು ಸ್ಪರ್ಶ ಸಿನಿಮಾದ ನಟಿ ರೇಖಾ ಹೇಳಿದ್ದಾರೆ. ಸುದೀಪ್ ಚಿತ್ರರಂಗಕ್ಕೆ ಬಂದು ಯಶಸ್ವಿ 25 ವರ್ಷಗಳನ್ನು ಪೂರೈಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸ್ಪರ್ಶ ರೇಖಾ, ಸುದೀಪ್ ಜೊತೆಗಿನ ಒಂದಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಬಿಚ್ಚುಗತ್ತಿ ಚಿತ್ರದ ಪ್ರೆಸ್ಮೀಟ್ನಲ್ಲಿ ಮಾತನಾಡಿದ ರೇಖಾ, ಸ್ಪರ್ಶ ಚಿತ್ರದ ಶೂಟಿಂಗ್ ವೇಳೆ ನಡೆದಿದ್ದ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸುದೀಪ್ ಚಿತ್ರರಂಗದಲ್ಲಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದಕ್ಕೆ ನಾಳೆ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಒಂದು ಸಾಂಗ್ ಡೆಡಿಕೇಟ್ ಮಾಡ್ತಿದ್ದೀನಿ ಅಂದ್ರು.