ಬೆಂಗಳೂರು :ಸ್ಯಾಂಡಲ್ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣ ಸಂಬಂಧ ಜೆಟ್ ಲಾಗ್ ಪಬ್ ಮಾಲೀಕರಾದ ಸೌಂದರ್ಯ ಜಗದೀಶ್ ದಂಪತಿ ಸಿಸಿಬಿ ವಿಚಾರಣೆ ಮುಗಿಸಿ ಹೊರಬಂದಿದ್ದಾರೆ.
ಡ್ರಗ್ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ: ಸೌಂದರ್ಯ ಜಗದೀಶ್ - ರಾಮ್ ಲೀಲಾ ಸಿನಿಮಾ ನಿರ್ಮಾಪಕ
ನಮ್ಮನ್ನ ಡ್ರಗ್ ವಿಚಾರವಾಗಿ ಕರೆದಿಲ್ಲ. ರಾಮ್ ಲೀಲಾ ಸಿನಿಮಾ ನಿರ್ಮಾಣದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಈಗಾಗಲೇ ಬಂಧಿತಳಾದ ಸಂಜನಾ ಈ ಫಿಲಂನಲ್ಲಿ ಆ್ಯಕ್ಟ್ ಮಾಡಿದ್ದರು- ಸೌಂದರ್ಯ ಜಗದೀಶ್
![ಡ್ರಗ್ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ: ಸೌಂದರ್ಯ ಜಗದೀಶ್ sowndarya and jagadeesh reaction about ccb investigation](https://etvbharatimages.akamaized.net/etvbharat/prod-images/768-512-9256774-1102-9256774-1603269108420.jpg)
ವಿಚಾರಣೆ ಬಳಿಕ ಸೌಂದರ್ಯ ಜಗದೀಶ್ ಮಾಧ್ಯಮಗಳಿಗೆ ಮಾತನಾಡಿ, ನಮ್ಮನ್ನು ಡ್ರಗ್ ವಿಚಾರವಾಗಿ ಕರೆದಿಲ್ಲ. ನಾವು ರಾಮ್ ಲೀಲಾ ಸಿನಿಮಾ ನಿರ್ಮಾಣ ಮಾಡಿದ್ವಿ. ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದರು.
ವಿಚಾರಣೆ ವೇಳೆ ರಾಮ್ ಲೀಲ್ ಸಿನಿಮಾ ಬಗ್ಗೆ ಮಾಹಿತಿ ಕೇಳಿದ್ರು. ಈ ಚಿತ್ರಕ್ಕಾಗಿ ಸಂಜಾನಾಗೆ ಎಷ್ಟು ಹಣ ಕೊಟ್ಟಿದ್ರಿ, ಚೆಕ್ ನಲ್ಲಿ ಪೇಮೆಂಟ್ ಕೊಟ್ಟಿದ್ರಾ, ಅಥವಾ ಕ್ಯಾಶ್ ನೀಡಿದ್ರಾ?,ಹಾಗೆಯೇ ನಮ್ಮ ಬಳಿ ಸಿನಿಮಾದ ಬಗ್ಗೆ ಮಾತ್ರ ಮಾಹಿತಿ ಕೇಳಿದ್ರು. ನಟಿ ಸಂಜನಾ ಸಿನಿಮಾ ಶೂಟಿಂಗ್ ಬರುವಾಗ ಹೇಗಿದ್ರು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ನಾವೂ ಸಿಸಿಬಿ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇವೆ. ಡ್ರಗ್ ಕೇಸ್ಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟನೆ ಕೊಟ್ಟರು.