ಕರ್ನಾಟಕ

karnataka

By

Published : Oct 22, 2019, 8:59 PM IST

ETV Bharat / sitara

400ನೇ ಚಿತ್ರಕ್ಕೆ ಸಿದ್ಧರಾದ್ರು ಸಾಹುಕಾರ್​ ಜಾನಕಿ... ಯಾವ ಭಾಷೆ, ನಿರ್ದೇಶಕ ಯಾರು?

ಡಾ. ರಾಜ್​ಕುಮಾರ್, ಎಂಜಿಆರ್, ಶಿವಾಜಿ ಗಣೇಶನ್ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಮೇರು ನಟರೊಂದಿಗೆ ನಟಿಸಿರುವ ಸಾಹುಕಾರ್ ಜಾನಕಿ ಇದೀಗ ಕಣ್ಣನ್ ನಿರ್ದೇಶಿಸುತ್ತಿರುವ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಇದು ಅವರ 400ನೇ ಚಿತ್ರವಾಗಿದೆ.

ಸಾಹುಕಾರ್ ಜಾನಕಿ

ಹಿರಿಯ ನಟಿ ಸಾಹುಕಾರ್ ಜಾನಕಿ ಹೆಸರು ಕೇಳದವರಿಲ್ಲ. ಆಂಧ್ರ ಪ್ರದೇಶದ ರಾಜಮಂಡ್ರಿಯ ತೆಲುಗು ಕುಟುಂಬದಲ್ಲಿ ಹುಟ್ಟಿ ತೆಲುಗು, ಕನ್ನಡ, ತಮಿಳು, ಹಿಂದಿ ಸೇರಿ 399 ಸಿನಿಮಾಗಳಲ್ಲಿ ನಟಿಸಿರುವ ಈ ಮಹಾನ್ ನಟಿ ಇದೀಗ ತಮ್ಮ 400ನೇ ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ.

ಸಾಹುಕಾರ್ ಜಾನಕಿ ಮೊದಲ ಹೆಸರು ಶಂಕರಮಂಚಿ ಜಾನಕಿ. ತೆಲುಗಿನ 'ಸಾಹುಕಾರ್' ಚಿತ್ರದಲ್ಲಿನ ಅವರ ಅಧ್ಭುತ ನಟನೆಗೆ ಮೆಚ್ಚಿದ ಜನತೆ ಅವರನ್ನು ಮುಂದೆ ಸಾಹುಕಾರ್ ಜಾನಕಿ ಎಂದೇ ಕರೆಯಲಾರಂಭಿಸಿದರು. 1954ರಲ್ಲಿ ಬಿಡುಗಡೆಯಾದ 'ದೇವಕನ್ನಿಕ' ಚಿತ್ರದ ಮೂಲಕ ಸಾಹುಕಾರ್ ಜಾನಕಿ ಕನ್ನಡಕ್ಕೆ ಕಾಲಿಟ್ಟರು. ನಂತರ ಆದರ್ಶ ಸತಿ, ರತ್ನಗಿರಿ ರಹಸ್ಯ, ಮಹಿಷಾಸುರ ಮರ್ದಿನಿ, ನವಕೋಟಿ ನಾರಾಯಣ, ಸಾಕು ಮಗಳು, ತಾಯಿಗೆ ತಕ್ಕ ಮಗ, ಕುಲಪುತ್ರ, ಶಬ್ಧವೇದಿ, ಅಭಿ ಸೇರಿ ಕನ್ನಡದ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಾಹುಕಾರ್ ಜಾನಕಿ ಅವರನ್ನು ಭೇಟಿ ಮಾಡಿದ ಚಿತ್ರತಂಡ

ಡಾ. ರಾಜ್​ಕುಮಾರ್, ಎಂಜಿಆರ್, ಶಿವಾಜಿ ಗಣೇಶನ್ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಮೇರು ನಟರೊಂದಿಗೆ ನಟಿಸಿರುವ ಸಾಹುಕಾರ್ ಜಾನಕಿ ಇದೀಗ ಕಣ್ಣನ್ ನಿರ್ದೇಶಿಸುತ್ತಿರುವ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಇದು ಅವರ 400ನೇ ಚಿತ್ರವಾಗಿದೆ. ಕಾಮಿಡಿ ನಟ ಸಂತಾನಂ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕ, ನಿರ್ದೇಶಕ ಸೇರಿದಂತೆ ಚಿತ್ರತಂಡದ ಸದಸ್ಯರು ಸಾಹುಕಾರ್ ಜಾನಕಿ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡಿದ್ದಾರೆ. ಇಂತಹ ಮಹಾನ್ ನಟಿ ನಮ್ಮ ಚಿತ್ರದಲ್ಲಿ ನಟಿಸುತ್ತಿರುವುದು ನಮಗೆ ನಿಜಕ್ಕೂ ಹೆಮ್ಮೆ ಎಂದು ಕಣ್ಣನ್ ಸಂತೋಷ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details