ಕರ್ನಾಟಕ

karnataka

ETV Bharat / sitara

ಸೋಷಿಯಲ್​​ ಮೀಡಿಯಾ ಸುಳ್ಳುಗಳ ವಿರುದ್ಧ ದಕ್ಷಿಣ ಭಾರತದ ನಟರ ಸಮರ - ರಕ್ಷಿತ್ ಶೆಟ್ಟಿ

ಫೇಕ್​ ನ್ಯೂಸ್​, ರೂಮರ್​​, ಆಧಾರ ರಹಿತ ವದಂತಿಗಳನ್ನು ತಡೆಯಲು ದಕ್ಷಿಣ ಭಾರತ ಚಿತ್ರರಂಗದ ತಾರೆಯರು ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿರುವ ಈ ಅಭಿಯಾನಕ್ಕೆ ಕನ್ನಡದ ನಟ ರಕ್ಷಿತ್ ಶೆಟ್ಟಿ ಕೈ ಜೋಡಿಸಿದ್ದಾರೆ.

ಸೋಷಿಯಲ್ ಮೀಡಿಯಾ

By

Published : Jun 22, 2019, 5:58 PM IST

ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿವೆ. ಹಸಿ ಹಸಿ ಸುಳ್ಳುಗಳು, ವಿಡಿಯೋ, ಪೋಟೋಗಳು ಜನರ ನೆಮ್ಮದಿಗೆ ಕೊಳ್ಳಿ ಇಡುತ್ತವೆ. ಅಷ್ಟೇ ಅಲ್ಲದೆ ಕೋಮು ಗಲಭೆ, ದಾಂಧಲೆಗಳಿಗೂ ಕಾರಣವಾಗುತ್ತಿವೆ.

ಸೋಷಿಯಲ್ ಮೀಡಿಯಾಗಳಲ್ಲಿ ಎಗ್ಗಿಲ್ಲದೆ ಹರಿದಾಡುವ ಫೇಕ್ನ್ಯೂ ಸ್​, ರೂಮರ್​, ಗಾಳಿ ಸುದ್ದಿಗಳ ತಡೆಗೆ ಈಗಾಗಲೇ ಸರ್ಕಾರ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ರಯತ್ನಿಸಿವೆ. ಇದೀಗ ದಕ್ಷಿಣ ಭಾರತ ಚಿತ್ರರಂಗದ ಗಣ್ಯರು ಸೋಷಿಯಲ್ ಮೀಡಿಯಾ ಸುಳ್ಳುಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಣ ತೊಟ್ಟಿದ್ದಾರೆ.

ಮಲಯಾಳಂನ ಮೇರು ನಟ ಮೋಹನ್ ​ಲಾಲ್​, ಮಂಜು ವಾರೀಯರ್​, ತಮಿಳಿನ ವಿಜಯ್ ಸೇತುಪತಿ ಹಾಗೂ ಕನ್ನಡದ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸೇರಿದಂತೆ ಕೆಲ ನಟಿಯರು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಜಾಗೃತಿ ಮೂಡಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಮಾಡಿರುವ ಅವರು, ಫೇಕ್​ ನ್ಯೂಸ್​ಗಳನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details