ಕರ್ನಾಟಕ

karnataka

ETV Bharat / sitara

ನಟನೆ ಜೊತೆಗೆ ಸಂಗೀತ ನಿರ್ದೇಶಕಿಯಾಗಿ ಸೌತ್ ನಟಿ ಎಸ್ಟರ್ ನೊರೊನ್ಹಾ - ಸೌತ್ ನಟಿ ಎಸ್ಟರ್ ನೊರೊನ್ಹಾ ಸುದ್ದಿ,

ಸೌತ್ ನಟಿ ಎಸ್ಟರ್ ನೊರೊನ್ಹಾ ನಟನೆ ಜೊತೆ ಸಂಗೀತ ನಿರ್ದೇಶಕಿಯಾಗಿ ಬಡ್ತಿ ಹೊಂದಿದ್ದಾರೆ.

South actress Ester Noronha, South actress Ester Noronha as acting and music director, South actress Ester Noronha news,  ಸೌತ್ ನಟಿ ಎಸ್ಟರ್ ನೊರೊನ್ಹಾ, ನಟನೆ ಜೊತೆಗೆ ಸಂಗೀತ ನಿರ್ದೇಶಕಿಯಾಗಿ ಸೌತ್ ನಟಿ ಎಸ್ಟರ್ ನೊರೊನ್ಹಾ, ಸೌತ್ ನಟಿ ಎಸ್ಟರ್ ನೊರೊನ್ಹಾ ಸುದ್ದಿ,
ಸೌತ್ ನಟಿ ಎಸ್ಟರ್ ನೊರೊನ್ಹಾ

By

Published : Apr 7, 2021, 12:29 PM IST

ಎಸ್ಟರ್ ನೊರೊನ್ಹಾ ಕನ್ನಡ, ತೆಲುಗು ಹಾಗು ಹಿಂದಿ ಸಿನಿಮಾಗಳಲ್ಲಿ ಗ್ಲ್ಯಾಮರ್​ನಿಂದಲೇ ಮಿಂಚುತ್ತಿರುವ ನಟಿ. ಇದೀಗ ವಿಭಿನ್ನ ಕಥಾಹಂದರ ‌ಹೊಂದಿರುವ ‘ದಿ ವೆಕೆಂಟ್ ಹೌಸ್’ ಸಿನಿಮಾದಲ್ಲಿ, ಎಸ್ಟರ್ ನೊರೊನ್ಹಾ ಅಭಿನಯಿಸುವ ಮೂಲಕ, ಈ ಚಿತ್ರಕ್ಕೆ ಸಂಗೀತ ನಿರ್ದೇಶಕಿಯಾಗಿ ಬಡ್ತಿ ಪಡೆಯುತ್ತಿದ್ದಾರೆ.

ಸೌತ್ ನಟಿ ಎಸ್ಟರ್ ನೊರೊನ್ಹಾ

ಇತ್ತೀಚೆಗೆ ತೆರೆ ಕಂಡ ಶಕೀಲಾ‌ ಸಿನಿಮಾದಲ್ಲಿ ರಿಚಾ ಚಡ್ಡಾ ಗೆಳತಿ ಪಾತ್ರದಲ್ಲಿ ಗಮನ ಸೆಳೆದಿದ್ದ ಎಸ್ಟರ್ ನೊರೊನ್ಹಾ, ಸದ್ಯ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ‌. ಸದ್ಯ ‘ದಿ ವೆಕೆಂಟ್ ಹೌಸ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು , ಪೋಸ್ಟರ್ ಕುತೂಹಲ ಮೂಡಿಸಿದೆ.

ಸೌತ್ ನಟಿ ಎಸ್ಟರ್ ನೊರೊನ್ಹಾ

ಥ್ರಿಲ್ಲರ್ ಕಾನ್ಸೆಪ್ಟ್ ಇಟ್ಟುಕೊಂಡು ಬರುತ್ತಿರುವ ‘ದಿ ವೆಕೆಂಟ್ ಹೌಸ್’ ಚಿತ್ರವನ್ನು ಶ್ರೇಯಸ್ಸ್ ಚಿಂಗಾ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಮತ್ತು ಶಕೀಲಾ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಜೊತೆ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಶ್ರೇಯಸ್ಸ್​ಗೆ ಇದು ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ.

ಸೌತ್ ನಟಿ ಎಸ್ಟರ್ ನೊರೊನ್ಹಾ

ಈ ಚಿತ್ರದ ನಾಯಕರಾಗೂ ಶ್ರೇಯಸ್ಸ್ ಚಿಂಗಾ ನಟಿಸಿದ್ದು, ಎಸ್ಟರ್ ನೊರೊನ್ಹಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಸೋಫಿಯಾ ಹಾಗೂ ಜಾಕಿಶ್ರಾಫ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ‌.

ಸೌತ್ ನಟಿ ಎಸ್ಟರ್ ನೊರೊನ್ಹಾ

‘ದಿ ವೆಕೆಂಟ್ ಹೌಸ್’ ಸಿನಿಮಾ ಕನ್ನಡ ಹಾಗು ಕೊಂಕಣಿ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಜಾನೆಟ್ ನೊರೊನ್ಹಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ರಾಜ್ಯ ಪ್ರಶಸ್ತಿ ವಿಜೇತ ಕಾಂತಾರ್ ಚಿತ್ರವನ್ನು ಜಾನೆಟ್ ನೊರೊನ್ಹಾ ನಿರ್ಮಿಸಿದ್ದರು. ಸದ್ಯದಲ್ಲೇ ‘ದಿ ವೆಕೆಂಟ್ ಹೌಸ್’ ಸಿನಿಮಾ ತೆರೆಗೆ ಬರಲಿದೆ.

ABOUT THE AUTHOR

...view details